ಕಾಮಾಲೆ ರೋಗಕ್ಕೆ ಕಡಿವಾಣ ಹಾಕೋದು ಹೇಗೆ..?

ಕಾಮಾಲೆ ಕಣ್ಣಿಗೆ ಕಮಡಿದ್ದೆಲ್ಲಾ ಹಳದಿ ಅನ್ನೋ ಗಾದೆ ಮಾತಿದೆ. ನಿಜಾನೇ.. ಕಾಮಾಲೆ ಅಂದ್ರೆ ಹಳದಿ ರೋಗ ಅಂತಾ ಅರ್ಥ. ಭಾರತೀಯ ವೈದ್ಯ ಶಾಸ್ತ್ರ ಇದನ್ನ ಪಾಂಡು ರೋಗ ಅಂತಾ ಕೂಡಾ ಕರೆಯುತ್ತೆ. ಅಥರ್ವಣ ವೇದದಲ್ಲಿ, ಚರಕ ಸಂಹಿತೆಯಲ್ಲಿ ಹಾಗೇ ಗರುಡ ಪುರಾಣ ಅನ್ನೋ ಗ್ರಂಥದಲ್ಲಿ ಕೂಡಾ ಈ ಕಾಮಾಲೆ ರೋಗದ ಬಗ್ಗೆ ಅದರ ಚಿಕಿತ್ಸೆಯ ವಿಧಾನಗಳ ಬಗ್ಗೆ ಬರೆಯಲಾಗಿದೆ ಅಂದ್ರೆ ಇದು ಸಾವಿರಾರು ವರ್ಷಗಳಿಂದಾ ಮನುಷ್ಯನನ್ನ ಕಾಡ್ತಿದ್ದ ಸಾಮಾನ್ಯ ರೋಗ ಅನ್ನೋದು ಗೊತ್ತಾಗತ್ತೆ. ಈ ಕಾಮಾಲೆ ರೋಗ ಪಾಂಡು ರೋಗ ಅಥವಾ ಹೆಪಟೈಟಿಸ್ ಹೀಗೆಲ್ಲಾ ಕರೆಸಿಕೊಳ್ಳೋ ಕಾಮಾಲೆ ಬರೋದಕ್ಕೆ ಕಾರಣ ನಮ್ಮ ಯಕೃತ್ತುವಿನಲ್ಲಿ ಕಾಣಿಸಿಕೊಳ್ಳೋ ತೊಂದರೆ. ಅತಿಹೆಚ್ಚು ಪಿತ್ತಕಾರಕ ಅಂಶಗಳ ಸೇವನೆಯಿಂದಾ ಕೂಡಾ ಈ ಖಾಯಿಲೆ ಬರತ್ತೆ. ಹಾಗಾದ್ರೆ ಕಾಮಾಲೆಯಿಂದಾ ನಮ್ಮನ್ನ ಕಾಪಾಡಿಕೊಳ್ಳೋದು ಹೇಗೆ..? ಈ ರೋಗದ ಲಕ್ಷಣಗಳೇನು..? ಅದಕ್ಕೆ ಮಾಡಿಕೊಳ್ಳಬೇಕಾದ ಮನೇ ಮದ್ದೇನು ಹಾಗೇ ಕಾಮಾಲೆ ಬಾರದಂತೆ ತಡೆಯೋದು ಹೇಗೆ ಈ ಎಲ್ಲಾ ಅಂಶಗಳ ಬಗ್ಗೆ ಮಾತಾಡ್ತಿದಾರೆ ಖ್ಯಾತ ಅಹಾರ ವಿಜ್ಞಾನಿ ಡಾ. ಖಾದರ್. ಬನ್ನಿ ಹಗಾದ್ರೆ ಅವರು ಹೇಳೋದೇನು ಕೇಳೋಣ.

Default Comments

Leave a Reply

Facebook Comments

Share This