ಹೆಬ್ಬೆರಳು ಕತ್ತರಿಸಿಕೊಟ್ಟ ನಂತರ ಏನಾದ ಗೊತ್ತಾ ಏಕಲವ್ಯ..?

ನಿಮಗೆ ಏಕಲವ್ಯ ಗೊತ್ತಿದೆ ಅಲ್ವಾ..? ಮಹಾಭಾರತದ ಕತೆ ಗೊತ್ತಿರೋ ಪ್ರತಿಯೊಬ್ಬರಿಗೂ ಗೊತ್ತಿರೋ ಪಾತ್ರ ಏಕಲವ್ಯನದ್ದು. ಅವನು ಮಹಾಭಾರತ ಕಥಾನಕದ ಅತ್ಯಂತ ದುರಂತ ನಾಯಕ. ಅವತ್ತಿನ ಕಾಲಕ್ಕೂ ವ್ಯವಸ್ಥೆ ಅಮಾಯಕರನ್ನ ಶೋಷಣೆಗೀಡು ಮಾಡ್ತಿತ್ತು ಅನ್ನೋದಕ್ಕೆ ಸ್ಪಷ್ಟವಾದ ಉದಾಹರಣೆ ಏಕಲವ್ಯ ಅಂತಾನೇ ನಾವೆಲ್ಲಾ ಭಾವಿಸಿದೀವಿ.

ಗುರು ದ್ರೋಣಾಚಾರ್ಯರ ಹತ್ರ ವಿದ್ಯೆ ಕಲಿಯೋದಕ್ಕೆ ಹೋಗುವ ಏಕಲವ್ಯ ಅಲ್ಲಿ ತಿರಸ್ಕಾರಕ್ಕೀಡಾಗ್ತಾನೆ. ವಾಪಸ್ಸು ಬಂದು ಹಟಕ್ಕೆ ಬಿದ್ದು ತಾನೇ ಬಿಲ್ವಿದ್ಯೆಯನ್ನ ಕಲೀತಾನೆ. ಹಾಗೆ ಕಲೀವಾಗ ಅವನು ಮಾಡೋ ಏಕೈಕ ತಪ್ಪು ಅಂದ್ರೆ ಅಲ್ಲಿ ದ್ರೋಣರ ಒಂದು ವಿಗ್ರಹವನ್ನ ಮಾಡಿ ತನ್ನೆದುರು ಇಟ್ಕೊಂಡಿದ್ದು.

ಮುಂದೆ ಶಿಷ್ಯರ ಜೊತೆ ಕಾಡಿಗೆ ಬರೋ ದ್ರೋಣರಿಗೆ ಅಲ್ಲೊಬ್ಬ ಅಪರಿಮಿತ ಬಿಲ್ವಿದ್ಯಾ ಚತುರ ಇರೋದು ಗೊತ್ತಾಗತ್ತೆ. ಅವರು ಕುತಂತ್ರದಿಂದಾ ಏಕಲವ್ಯನ ಹೆಬ್ಬೆರಳನ್ನೇ ಗುರುದಕ್ಷಿಣೆಯ ರೂಪದಲ್ಲಿ ಕಿತ್ಕೊಂಡು ಬಿಡ್ತಾರೆ. ಅಲ್ಲಿಗೆ ದ್ರೋಣರ ಸ್ವಾರ್ಥವನ್ನ ಹೇಳಿ ನಾವು ಏಕಲವ್ಯನ ಕತೆಯನ್ನ ಮುಗಿಸಿಬಿಡ್ತೀವಿ.

ಆದ್ರೆ ಒಂದು ಯೋಚನೆ ಮಾಡಿ, ಏಕಲವ್ಯನನ್ನ ಹಾಗೇ ಬಿಟ್ಟಿದ್ರೆ ದ್ರೊಣಾಚಾರ್ಯರು ವೈಯಕ್ತಿಕವಾಗಿ ಏನು ಕಳಕೋತಿದ್ರು..? ಅವರ ಪ್ರತಿಮೆಗೆ ಕೂಡಾ ವಿದ್ಯೆ ಕಲಿಸೋ ಶಕ್ತಿ ಇದೆ ಅಂತಾ ಮೂಢ ಜನಾ ಮಾತಾಡಿಕೊಳ್ತಿರಲಿಲ್ವಾ..?

ಹಾಗಿದ್ರೂ ದ್ರೋಣರು ಏಕಲವ್ಯನ ಹೆಬ್ಬೆರಳು ಕಿತ್ಕೊಂಡಿದ್ದು ಯಾಕೆ.? ಈ ಕುತಂತ್ರದ ಹಿಂದೆ ಕುಡಾ ಕೃಷ್ಣ ಅನ್ನೋ ಮಹಾಗಾರುಡಿಗನ ಕೈವಾಡ ಇತ್ತಾ..? ಅಥವಾ, ಮುಂದಾಗಲಿರುವ ಮಹಾ ಯುದ್ಧವನ್ನ ಗಮನದಲ್ಲಿಟ್ಟುಕೊಂಡು ವಿಧಿ, ದ್ರೋಣರಿಂದಾ ಅಂಥಾ ಹೀನ ಕೆಲಸಾ ಮಾಡಿಸಿಬಿಡ್ತಾ..?

ಏಕಲವ್ಯ ಜರಾಸಂಧ ಅನ್ನೋ ರಕ್ಕಸನ ಸೇನಾಧಿಪತಿಯ ಮಗ ಅನ್ನೋಕಾರಣಕ್ಕೇ ದ್ರೋಣರು ಮುನ್ನೆಚ್ಚರಿಕೆ ವಹಿಸಿ ಅವನಿಗೆ ವಿದ್ಯೆ ಕಲಿಸೋದಕ್ಕೆ ನಿರಾಕರಿಸಿದ್ದರಾ..? ಅವನು ಮುಂದೆ ಮಹಾಭಾರತ ಯುದ್ಧದಲ್ಲಿ ಕೌರವರ ಪರ ವಹಿಸಿ ಕದನಕ್ಕಿಳೀತಿದ್ನಾ.? ಇಷ್ಟಕ್ಕೂ ಈ ಏಕಲವ್ಯ ಬೆರಳು ಕತ್ತರಿಸಿಕೊಟ್ಟನಂತರ ಏನಾದ..? ಅವನ ಬಗ್ಗೆ ಸಣ್ಣದೊಂದು ಕುತೂಹಲಭರಿತ ಮಾಹಿತಿ ಇಲ್ಲಿದೆ. ನಿಮಗಾಗೀನೇ ಹೆಕ್ಕಿ ತಂದಿರೋದು..

ಒಂದು ಸ್ವಲ್ಪ ಬಿಡುವು ಮಾಡಿಕೊಂಡು ನೋಡಿಬಿಡ್ತೀರಿ ಅಲ್ವಾ..?

Default Comments

Leave a Reply

Facebook Comments

Share This