ಆ ಮಂದಿರದ ಮೇಲೆ ದಾಳಿ ಮಾಡಿದವರು ಯಾರು ಗೊತ್ತಾ..?

ಹುಶಃ ಈ ದೇಶ ಕಂಡಷ್ಟು ಆಕ್ರಮಣಗಳನ್ನ ಅತ್ಯಾಚಾರಗಳನ್ನ ವಿಶ್ವದ ಬೇರಿನ್ಯಾವ ದೇಶವೂ ಕಂಡೇಇಲ್ಲವೇನೋ.. ಈ ನಾಡಿನ ಮೇಲೆ ದಾಳಿ ಮಾಡಿದವರು, ಈ ದೇಶವನ್ನ ದೋಚಿದವರು, ಇಲ್ಲಿನ ಸಂಸ್ಕೃತಿ ಪರಂಪರೆಗಳನ್ನ ನಾಶ ಮಾಡೋದಕ್ಕೆ ಯತ್ನಿಸಿದವರೂ ಅದೆಷ್ಟಡು ಜನಾನೋ.. ಆದ್ರೂ, ಉತ್ತರ ಭಾರತದ ಮೇಲೆ ನಡೆದ ದಾಳಿಗಳಿಗೆ ಹೋಲಿಕೆ ಮಾಡಿದ್ರೆ ದಕ್ಷಿಣ ಸ್ವಲ್ಪ ಮಟ್ಟಿಗೆ ಸುರಕ್ಷಿತವಾಗಿತ್ತೂ ಅಂತಾ ಹೇಳ್ತಾರೆ. ಹಾಗಂತಾ ಇಲ್ಲಿ ದಾಳಿಗಳು ನಡೀಲಿಲ್ಲಾ ಅಂತಲ್ಲಾ, ಇಲ್ಲಿಗೂ ಅನ್ಯಧರ್ಮೀಯರ ಆಕ್ರಮಣಗಳಾಗಿದ್ವು.. ಇಲ್ಲಿನ ಆಲಯಗಳೂ, ವಿಗ್ರಹಗಳೂ ವಿಕೃತ ಮನಸ್ಥತಿಯ ದಾಳಿಕೋರರಿಂದಾ ನಾಶ ಮಾಡಲ್ಪಟ್ಟಿದ್ದವು. ಅಂಥಾ ದೇವಾಲಯಗಳ ಪೈಕಿ ಮಧುರೆಯ ಮೀನಾಕ್ಷಿ ಆಲಯ ಕೂಡಾ ಒಂದು. ಇಷ್ಟಕ್ಕೂ ಮಧುರೆಯ ಮೇಲೆ ದಾಳಿ ಮಾಡದವರ್ಯಾರು..? ಮೀನಾಕ್ಷಿ ದೇವಾಲಯದ ಇತಿಹಾಸವಾದರೂ ಎಂಥದ್ದು..? ನೀವು ತಿಳಕೋಬೇಕೂ ಅಂದ್ರೆ ಈ ವಿಡಿಯೋ ಲಿಂಕನ್ನ ಕ್ಲಿಕ್ ಮಾಡಿ

ಮಧುರೈನ ಈ ದೇಗುಲ ಭಾರತದ ಅತೀ ದೊಡ್ಡ ದೇವಸ್ಥಾನ ಅನ್ನೋ ಖ್ಯಾತಿ ಪಡೆದುಕೊಂಡಿದೆ. ಸಾವಿರಾರು ವರ್ಷಗಳ ಇತಿಹಾಸವಿರೋ ದೇವಾಲಯ ಶೈವ ಸಂಪ್ರದಾಯದಲ್ಲಿ ನಿರ್ಮಾಣಗೊಂಡಿದೆ.. ತತ್ವ ಶಾಸ್ತ್ರದಲ್ಲಿ ಪ್ರಸಿದ್ಧ ಸಂತನಾಗಿರುವ ತಿರು ಜ್ಞಾನ ಸಂಬಂಧರ್ ಅವರು ತಮ್ಮ ಸಾಹಿತ್ಯದಲ್ಲಿ ಉಲ್ಲೇಖಿಸಿರುವಂತೆ ದೇವಾಲಯವನ್ನು 7 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ವಿಜಯನಗರ ಆಳ್ವಿಕೆ ಕಾಲದಲ್ಲಿ ಈ ದೇಗುಲ ಮಧುರೈನ ನಾಯಕರಿಂದ ಈ ದೇವಸ್ಥಾನ ಕಟ್ಟಲಾಯ್ತು ಅಂತ ಹೇಳ್ತಾರೆ, 

 1310 ರಲ್ಲಿ ಮುಸ್ಲೀಂ ದೊರೆ ಮಲ್ಲಿಕಾಫರ್ ದಾಳಿಯಿಂದಾಗಿ ದೇವಾಲಯದಲ್ಲಿ ಪುರಾತನ ಸಾಹಿತ್ಯ ಮತ್ತು ಶಾಸನ ಸೇರಿದಂತೆ ಇಲ್ಲಿನ ಶಿಲ್ಪ ಕಲೆಗಳನ್ನ ನಾಶ ಪಡಿಸಿದ್ದ…ದಾಳಿಕೋರರಿಂದ ನಾಶವಾದ ದೇವಾನುದೇವತೆಗಳ ವಿಗ್ರಹಗಳನ್ನ ಈ ದೇವಾಲಯದಲ್ಲಿ ಇಂದಿಗೂ ಕಾಣ ಬಹುದಾಗಿದೆ..

ನಿಮಗೆ ಅಚ್ಚರಿ ಎನಿಸೋ ಇನ್ನಷ್ಟು ಮಾಹಿತಿಗಳು ಇಲ್ಲಿವೆ ನೋಡಿ,  ಮಧುರೈನ ಈ ದೇಗುಲ ಒಂದಲ್ಲ ಎರಡಲ್ಲ ಹದಿನಾಲ್ಕು ಭವ್ಯವಾದ ಗೋಪುರಗಳನ್ನ ಹೊಂದಿದೆ. ಆ ಹದಿನಾಲ್ಕರಲ್ಲಿ ಅತೀ ಎತ್ತರವಾದುದು ಅಂದ್ರೆ 51.9 ಮೀಟರ್ ಇರೋ ಒಂದು ಗೋಪುರ. 

ಹಾಗೇ ದೇವಸ್ಥಾನ ಅಂದ್ರೆ ಸಾಮಾನ್ಯವಾಗಿ ಎಷ್ಟು ವಿಸ್ತೀರ್ಣದಲ್ಲಿ ಕಟ್ಟಿರ್ತಾರೆ..? ಹತ್ತು ಗುಂಟೆ..? ಒಂದು ಎಕರೆ..? ಎರಡು ಎಕರೆ..?  ಅಷ್ಟೇ ಅಲ್ವಾ? ಮಧುರೈನ ಈ ದೇಗುಲ ಇರೋದು ಒಟ್ಟೂ 45 ಎಕರೆ ಜಾಗದಲ್ಲಿ. ಕಣ್ಣರಳಿದ್ವು ಅಲ್ವಾ? ಕಣ್ಣ ದೃಷ್ಟಿ ಹರಿಯಲುಕಷ್ಟ ಅನಿಸೋವಷ್ಟು ವಿಸ್ತೀರ್ಣವಾಗಿರೋದಕ್ಕೆ ಇದು ಭಾರತದ ಅತೀ ದೊಡ್ಡ ದೇಗುಲ ಅನ್ನೋ ಹೆಸರನ್ನ ಗಳಿಸಿದೆ. 

ಇನ್ನು ಈ ದೇವಸ್ಥಾನದ ಉದ್ದ 254 ಮೀಟರ್ ಇದ್ರೆ ಅಗಲ 237 ಮೀಟರ್. ಇನ್ನು ಈ ದೇಗುಲದಲ್ಲಿ ಮನಸೆಳೆಯೋ ಇನ್ನೊಂದು ಅಂಶವೆಂದ್ರೆ ಅಲ್ಲಿ ಇರೋ ಕಂಬಗಳು, ಬರೋಬ್ಬರಿ 985 ಕಂಬಗಳನ್ನ ಮಧುರೈ ದೇಗುಲ ಹೊಂದಿದೆ. ಈ ಕಂಬಗಳನ್ನು ರಾಜ ವಿಶ್ವನಾಥನ ಆಡಳಿತದ ಸಂದರ್ಭದಲ್ಲೇ ನಿರ್ಮಾಣ ಮಾಡಲಾಗಿದೆ ಅನ್ನೋ ಪ್ರತೀತಿಯಿದೆ. ಇನ್ನು ಅತ್ಯಂತ ಮೋಹಕವಾಗಿ ಕೆತ್ತನೆಗೊಂಡ ಕಂಬಗಳು ಸಂಗೀತ ವಾದ್ಯಗಳು ಅಂದ್ರೆ ನೀವ್ ನಂಬಲೇ ಬೇಕು, ಈ ಕಂಬಗಳನ್ನ ಮೀಟಿದಾಗ ಮಧುರವಾದ ನಾದ ಹೊರಹೊಮ್ಮುತ್ತೆ..ಅಲ್ಲಿನ ಒಂದೊಂದು ಕಂಬದಲ್ಲೂ ತಬಲ ವೀಣೆ ಅನೇಕ ಸಂಗೀತ ವಾದ್ಯಗಳು ಅಚ್ಚರಿ ಹುಟ್ಟಿಸುತ್ತೆ.

ಇನ್ನು ಆ ದೇವಿಗೆ ಯಾಕೆ  ಮೀನಾಕ್ಷಿ ಅಂತ ಹೆಸ್ರು ಬಂತು ಅನ್ನೋ ಕುತೂಹಲ ನಿಮ್ಮನ್ನ ಕಾಡಿರ್ಬಹುದು. ಅಲ್ಲಿ ನೆಲೆಸಿರೋ ದೇವಿಗೆ ಮೀನಾಕ್ಷಿ ಅನ್ನೋ ಹೆಸರು ಬಂದಿರೋದಕ್ಕೆ ಪ್ರಮುಖವಾದ ಒಂದು ಕಾರಣವಿದೆ, ಅದೇನಂದ್ರೆ ಮೀನಾಕ್ಷಿ ಸುಂದರ ಅಕ್ಷಿಯನ್ನ ಹೊಂದಿರುವಂತವಳು.  ಆ ದೇವಿಯ ಕಣ್ಣಿನ ಆಕಾರ ಇರೋದು ಮೀನಿನಂತೆ ,ನೀರಿನಲ್ಲಿ ಮೀನು ಹೇಗೆ ನಿದ್ದೆ ಮಾಡದೆ ಎಚ್ಚರಿಕೆಯಿಂದಿರುತ್ತೋ  ಅದೇ ರೀತಿ  ದೇವಿ ಮೀನಾಕ್ಷಿ ಕೂಡ ನಿದ್ರೆಗೆ ಜಾರದೇ ಸದಾ ಎಚ್ಚರದಿಂದಿದ್ದೂ ತನ್ನ ಭಕ್ತರ ಕಾಯುತ್ತಿದ್ದಾಳೆ. ಅನ್ನೋ ನಂಬಿಕೆ ಕೋಟ್ಯಾನುಕೋಟಿ ಭಕ್ತರದ್ದು ಹೀಗಾಗಿಯೇ ಭಕ್ತಸಾಗರ ಈಕೆಯನ್ನ ಮಧುರೈ ಮೀನಾಕ್ಷಿ ಅಂತಲೇ ಆರಾಧಿಸುತ್ತಿರೋದು.

ಇನ್ನು ತಮಿಳುನಾಡಿನಲ್ಲೇ ಅತೀ ದೊಡ್ಡ ನಗರ ಈ ಮಧುರೈ.. ಇದನ್ನ ದಕ್ಷಿಣ ಭಾರತದ ಅಥೆನ್ಸ್ ಅಂತಲೇ ಕರೆಯಲಾಗುತ್ತೆ… ಇನ್ನು ಈ ನಗರಕ್ಕೆ ಮಧುರೈ ಅನ್ನೋ ಹೆಸರು ಪಡೆದಿರೋದ್ರ ಹಿಂದೆ ಒಂದು ಕುತೂಹಲಕಾರಿ ವಿಷ್ಯವಿದೆ. ಪಾಂಡ್ಯರ ರಾಜ ವಂಶಜ ಕುಲಶೇಖರ ಸ್ವಯಂಬೂಲಿಂಗವಿದ್ದ ಆ ಪ್ರದೇಶವನ್ನು ಶುಚಿಗೊಳಿಸಿ ಅಲ್ಲಿ ಮಹೇಶ್ವರನಿಗೆಂದೇ ಒಂದು  ದೇವಾಲಯವನ್ನು ನಿರ್ಮಿಸಲು ಅಪ್ಪಣೆ ನೀಡ್ತಾನೆ..ದೇವಾಲಯವು ನಿರ್ಮಾಣವಾಗುತ್ತೆ.. ಅದರಿಂದ ಪ್ರಸನ್ನಗೊಂಡ ಶಿವ ಪರಮಾತ್ಮ ತನ್ನ ಜಟಾಜೂಟವನ್ನು ಬಿಡಿಸಿ ಅಲ್ಲಿ ಜೇನಿನ ಮಳೆಯನ್ನೇ ಸುರಿಸುತ್ತಾನೆ.. ಹೀಗಾಗಿ ಈ ಪುಣ್ಯಸ್ಥಳಕ್ಕೆ  ಮಧುರೈ ಅನ್ನೋ ಹೆಸರು ಬಂದದ್ದು, ಈ ಮಧು ಶಬ್ದಕ್ಕೆ ಒಂದು ವಿಶೇಷವಾದ ಅರ್ಥವೂ ಇದೆ..ಅದುವೇ ಅತಿಯಾದ ಸಿಹಿ ಅಂತ…ಹೀಗಾಗಿ ಈ ಸ್ಥಳ ಮಧುರೈ ಎಂದೇ ಪ್ರಸಿದ್ಧಿ ಪಡೆದಿದೆ…

ಇನ್ನೂ ಹಲವು ವೈಶಿಷ್ಟ್ಯತೆಯನ್ನ  ತನ್ನೊಡಲಲ್ಲಿಟ್ಟುಕೊಂಡಿರೋ ಮಧುರೈ ತನ್ನ ಸಂಸ್ಕೃತಿ ಪರಂಪರೆಗಳಿಂದಲೇ ಅತಿ ಹೆಚ್ಚು ಪ್ರಾಮುಖ್ಯತೆ ಹೊಂದಿದೆ.. ಇನ್ನು ಈ ಮಧುರೈ ವ್ಯಾಪಾರ ಕೇಂದ್ರವಾಗಿಯೂ ಪ್ರಾಮುಖ್ಯತೆ ಪಡೆದಿದೆ.. 3ನೇ ಶತಮಾನದ ಕಾಲದಲ್ಲಿ ಗ್ರೀಕ್ ಮತ್ತು ರೋಮ್ ನ ವರ್ತಕರು ಇಲ್ಲಿಗೆ ಆಗಮಿಸಿ ಇಲ್ಲಿನ ಪಾಂಡ್ಯ  ದೊರೆಗಳೊಂದಿಗೆ ವ್ಯಾಪಾರ ಸಂಪರ್ಕ ಹೊಂದಿದ್ರು… ಈ ರೀತಿಯ  ಮಧುರೈ ನಗರದ ಹೆಸರಿನ ಹಲವು ಉಲ್ಲೇಖ, ಮತ್ತು ಅನೇಕ ಪ್ರಾಚೀನ  ಮಾಹಿತಿಗಳು ಪಾಂಡಿತ್ಯಪೂರ್ಣ ಅನ್ನೋ ಗ್ರಂಥದಲ್ಲಿ ಅಡಕವಾಗಿದೆ…

ಇಂಥಾ ಅನೇಕ ಇಂಟರೆಸ್ಟಿಂಗ್ ಮಾಹಿತಿಗಳಿಗಾಗಿ ನಮ್ಮ  https://www.youtube.com/channel/UChYmSuQtdcVimTk7jmpq5rg/featured  ಗೆ Log in ಆಗಿ ನಮ್ಮ You tube ಚಾನೆಲ್    Subscribe ಮಾಡಿ.

Default Comments

Leave a Reply

Facebook Comments

Share This