ಸರ್ಕಾರಿ ಆಸ್ಪತ್ರೆ ಗಳನ್ನ ಸರಿ ಮಾಡೋದು ಹೇಗೆ..? ಶಾಪ ವಿಮೋಚನೆಗೆ ಇಲ್ಲಿದೆ ಸುಲಭ ಮಾರ್ಗ..!

ಸರ್ಕಾರಿ ಆಸ್ಪತ್ರೆ..! ಹಾಗಂದ ಕೂಡಲೇ ಸಾಕಷ್ಟು ಜನಾ ಹಾವು ಮೆಟ್ಟಿದವರ ಥರಾ ಆಡ್ತಾರೆ. ನಿಜ,ಅದಕ್ಕೆ ಕಾರಣಾನೂ ಇದೆ. ಅಲ್ಲಿ ಚಿಕಿತ್ಸೆ ಸರಿಯಾಗಿ ಸಿಗೋದಿಲ್ಲ.. ಸೌಲಭ್ಯಗಳಿರೋದಿಲ್ಲ.. ಯಂತ್ರೋಪಕರಣಗಳು ಸರಿಯಾಗಿ ಕೆಲಸಾ ಮಾಡೋದಿಲ್ಲ. ಅದೆಲ್ಲದಕ್ಕಿಂತಾ ಹೆಚ್ಚಾಗಿ ವೈದ್ಯರಿಗೆ ಮನುಷ್ಯತ್ವ ಇರೋದಿಲ್ಲ. ಅವರು ಜವಾಬ್ದಾರಿ ತಗೊಳೋದಿಲ್ಲ.. ಹೀಗೆ ಸರ್ಕಾರಿ ಆಸ್ಪತ್ರೆ ಅಂದ್ರೆ ದೂರುಗಳ ಸರಮಾಲೆ.  ಆದ್ರೆ ನಿಮಗೆ ಗೊತ್ತಿರಲಿ, ಇವತ್ತಿಗೂ ಗ್ರಾಮೀಣ ಭಾಗದಲ್ಲಿ ವೃತ್ತಿಯನ್ನ ಸೇವೆ ಥರಾ ಮಾಡ್ತಿರೋ ಸಾಕಷ್ಟು ಸರ್ಕಾರಿ ವೈದ್ಯರಿದಾರೆ. ಆದ್ರೆ ಅಲ್ಲಿನ ಆಸ್ಪತ್ರೆಗಳ  ವ್ಯವಸ್ಥೆ ಸರಿ ಇಲ್ಲ ಅಷ್ಟೇ.

ಹಾಗಂತಾ ಸರ್ಕಾರ ಆರೋಗ್ಯಕ್ಕಾಗಿ ಖರ್ಚು ಮಾಡ್ತಿರೋ ಹಣ ಕಡಿಮೆ ಏನಲ್ಲ.. ಪ್ರತಿಯೊಬ್ಬರಿಗೂ ಸೂಕ್ತ ಚಿಕಿತ್ಸೆ ಸಿಗಬೇಕು ಅನ್ನೋ ಕಾರಣಕ್ಕೆ, ಆರೋಗ್ಯ ಇಲಾಖೆ ಅಂತ ಒಂದಿದೆ. ಅದಕ್ಕೊಬ್ಬರು ಸಚಿವರಿದಾರೆ. ಐ.ಎ.ಸ್ ಅಧಿಕಾರಿಗಳ ತಂಡ ಅಡ್ಮಿನಿಸ್ಟ್ರೇಷನ್ ನೊಡಿಕೊಳ್ಳೊದಕ್ಕಿದೆ. ಸಾವಿರಾರು ನುರಿತ ಅನುಭವಿ ವೈದ್ಯರು, ಪ್ರತಿ ಬಜೆಟ್ ನಲ್ಲೂ ಕೋಟ್ಯಂತರ ರೂಪಾಯಿ ಅನುದಾನ, ವೇತನ ಸಾರಿಗೆ,ಭತ್ಯ ಎಲ್ಲಾ ಇದೆ. ಆದ್ರೆ ಸರ್ಕಾರಿ ಆಸ್ಪತ್ರೆಗಳು ಸುಧಾರಿಸಿವೆಯಾ ಖಂಡಿತಾ ಇಲ್ಲ.

ಹಾಗಾದ್ರೆ ಅವು ಸರಿ ಹೋಗೋದೇ ಇಲ್ವಾ..? ಜನಾ ಆರೋಗ್ಯಕ್ಕಾಗಿ ಖಾಸಗಿ ಆಸ್ಪತ್ರೆಗಳ ಬಾಗಿಲಲ್ಲಿ ನಿಲ್ಲಲೇಬೇಕಾ..? ಖಂಡಿತಾ ಅಂಥಾ ಆಗತ್ಯಾ ಇಲ್ಲಾ ಅಂತಾರೆ ಮೈಸೂರಿನ ಯುವ ವೈದ್ಯ ಡಾ. ಮಂಜುನಾಥ್. ಈ ದೇಶದ ಸರ್ಕಾರೀ ಆಸ್ಪತ್ರೆಗಳನ್ನ ಸುಧಾರಿಸಿ, ಹೈಟೆಕ್ ಆಸ್ಪತ್ರೆಗಳಿಗೆ ಸರಿಸಮಾನವಾದ ಸೌಲಭ್ಯಗಳನ್ನ ಒದಗಿಸೋದಕ್ಕೆ ಅವರ ಬಳಿ ಒಂದು ಮಾಸ್ಟರ್ ಪ್ಲಾನ್ ಇದೆ. ಅದೇನು ಅನ್ನೋದನ್ನ ತಿಳಕೊಳೋದಕ್ಕಾಗಿ ಕೆಳಗಿನ ವಿಡಿಯೋ ಕ್ಲಿಕ್ ಮಾಡಿ. ಈ ಯುವ ವೈದ್ಯ ಡಾ. ಮಂಜುನಾಥ್ ಅವರ ಐಡಿಯಾ ನಿಮಗೆ ಇಷ್ಟವಾದ್ರೆ, ಈ ಪೋಸ್ಟನ್ನ ಷೇರ್ ಮಾಡಿ.

Default Comments

Leave a Reply

Facebook Comments

Share This