ನಿಮಗೆ ಮಹಾ ಭಾರತ ಯುದ್ಧ ಗೊತ್ತಿದೆ ಅಲ್ವಾ..?

ಅಲ್ಲಿ ಪಾಂಡವರು ಕೌರವರ ನಡುವಿನ ಕದನದಲ್ಲಿ ಅಕ್ಷೋಹಿಣಿ ಸೈನ್ಯ ಭಾಗವಹಿಸಿತ್ತು ಅಂತಾ ಹೇಳ್ತಾರೆ.. ಇಷ್ಟಕ್ಕೂ ಒಂದು ಅಕ್ಷೋಹಿಣಿ ಅಂದ್ರೆ ಎಷ್ಟು ಗೊತ್ತಾ..? ಆ ಸಂಖ್ಯೆಯನ್ನ ಕೇಳಿದ್ರೇನೇ ನೀವು ಬೆಚ್ಚಿ ಬಿಳ್ತೀರಿ..

ಗೆಳೆಯರೇ, ಕುರುಕ್ಷೇತ್ರ ಕದನ ಅನ್ನೋದು ಈ ದೇಶ ಕಂಡ ಅತ್ಯಂತ ದೊಡ್ಡ ಮಹಾಯುದ್ಧಗಳ ಪೈಕಿ ಒಮದು.. ರಾಮಾಯಣ ಕಾಲದಲ್ಲಿ ರಾವಣ ಹಾಗೂ ರಾಮರ ನಡುವೆ ಯುದ್ಧವಾಗಿದ್ದು ನಿಜಾ ಆದ್ರೆ,  ಯುದ್ಧದಲ್ಲಿ ಭಾಗಹಿಸಿದ್ದ ಸೇನೆ ಹಾಗೂ ಸಾವು ನೋವುಗಲನ್ನು ಗಮನಿಸಿದಾಗ. ಮಹಾಭಾರತ ಯುದ್ಧದಷ್ಟು ದೊಡ್ಡ ಯುದ್ಧ ಅವತ್ತಿನ ಕಾಲಕ್ಕೆ ಮತ್ತಿನ್ಯಾವುದೂ ನಡೆದೇ ಇಲ್ಲವೇನೋ ಅನ್ನಿಸತ್ತೆ.. ಮಹಾ ಭಾರತದ ಯುದ್ಧದಲ್ಲಿ ಭಾಗವಹಿಸಿದ್ದ ಸೇನೆಯ ಪ್ರಮಾಣವನ್ನ ಗಮನಿಸಿದಾಗ ಅದೇ ಪ್ರಪಂಚದ ಮೊದಲ ಮಹಾ ಯುದ್ಧ ಅಂದ್ರೂ ತಪ್ಪಾಗೋದಿಲ್ಲವೇನೋ.. 

ಮಹಾಭಾರತದ ಯುದ್ಧದಲ್ಲಿ ಕೇವಲ ಪಾಂಡವರು ಮತ್ತು ಕೌರವರು ಮಾತ್ರ ಕಾದಾಡಲಿಲ್ಲ.. ವಿಶ್ವದ ನಾನಾ ಭಾಗಗಳ ಸೇನೆ ಆ ಯುದ್ಧದಲ್ಲಿ ಭಾಗವಹಿಸಿತ್ತು.. ಅಂಗವಂಗ ಕಳಿಂಗ ಕಾಂಬೋಜಗಳೂ ಸೇರಿದಂತೆ, ಗಾಂಧಾರ ಅಂತ ಕರೆಸಿಕೊಳ್ಳಲ್ಪಡುತ್ತಿದ್ದ ಇವತ್ತಿನ ಆಫ್ಘನಿಸ್ತಾನ, ರೂಮ ಅಂತಾ ಗುರುತಿಸಿಕೊಮಡಿದ್ದ ಇವತ್ತಿನ ರೋಂ, ಹಬೀಷ, ಅಜಂ, ತುರ್ಕಿಸ್ತಾನ ಮುಂತಾದ ದೇಶಗಳ ಸೇನೆ ಕೂಡಾ ಈ ಯುದ್ಧದಲ್ಲಿ ಭ ಆಗವಹಿಸಿತ್ತು.. ಅಶ್ವದೇಶ ಅಂತ ಕರೆಸಿಕೊಳ್ಳಲ್ಪಡುತ್ತಿದ್ದ ಅರಬ್ ದೇಶದ ಕುದುರೆಗಳನ್ನ ಬಳಸಲಾಗಿತ್ತು.. ಮಹಾಭಾರತದ ಕತೆಯಲ್ಲಿ ಹೇಳಿರುವಂತೆ, ಈ ಯುದ್ಧದಲ್ಲಿ ಕೌರವರ ಪರ ಹನ್ನೊಮದು ಅಕ್ಷೋಹಿಣಿ ಸೈನ್ಯ ಭಾಗವಹಿಸಿತ್ತಂತೆ. ಹಾಗೇ ಪಾಂಡವರ ಪರ ಏಳು ಅಕ್ಷೋಹಿಣಿ ಸೈನ್ಯ ಬಂದು ಸೇರಿತ್ತು.. ಒಟ್ಟು ಎರಡೂ ಪಂಗಡಗಳೂ ಸೇರಿದರೆ ಹದಿನೆಂಟು ಅಕ್ಷೋಹಿಣಿ.. 

ಇಷ್ಟಕ್ಕೂ ಒಂದು ಅಕ್ಷೋಹಿಣಿ ಸೇನೆ ಅಂದ್ರೆ ಎಷ್ಟು ಗೊತ್ತಾ..?  21,672 ಆನೆಗಳು 21870 ರಥಗಳು 65610 ಅಶ್ವಾರೋಹಿಗಳು, ಮತ್ತು 109350 ಪದಾತಿ ದಳ. ಈಗ ಲೆಕ್ಕಾ ಹಾಕಿ, ಹದಿನೆಂಟು ಅಕ್ಷೋಹಿಣಿ ಸೇನೆ ಅಂದ್ರೆ, 300096 ಆನೆಗಳು393660 ರಥಗಳು,1180980  ಕುದುರೆ ಸವಾರರು ಮತ್ತು 1968300 ಪದಾತಿ ದಳ. ಇದು ಕೇವಲ ಸೇನೆಯ ವಿವರ ಮಾತ್ರ.  ಅಂದ್ರೆ, ಈ ಲೆಕ್ಕದ ಪ್ರಕಾರ ಮಹಾಭಾರತ ಯುದ್ಧದಲ್ಲಿ ಸರಿ ಸುಮಾರು ಮೂವತ್ತೆಂಟೂವರೆ ಲಕ್ಷ ಸೇನೆ, ಸೇನಾ ನಾಯಕರು, ಪದಾತಿ ದಳ ಭಾಗವಹಿಸಿತ್ತು..

ಇನ್ನು ಸಾರಥಿಗಳು ಸೇವಕರನ್ನ ಸೇರಿಸಿದರೆ ಈ ಸಂಖ್ಯೆ ನಲವತ್ತು ಲಕ್ಷ ದಾಟುತ್ತದೆ. ಸೇವಕರು ಪರಿಚಾರಕರು ಭಾಗವಹಿಸಿದ್ದರು.. ಆ ಪೈಕಿ ಜೀವಂತ ವಾಘಿ ಉಳಿದವರು ಕೌರವರ ಪಡೆಯಲ್ಲಿ ನಾಲ್ಕು ಜನ ಹಾಗೂ ಪಾಂಡವರ ಪಡೆಯಲ್ಲಿ ಎಂಟು ಜನಾ ಮಾತ್ರ. 

ಕೌರವರ ಪಡೆಯಲ್ಲಿ ಕೃಪಾಚಾರ್ಯ ,ಕೃತವರ್ಮ, ಅಶ್ವತ್ಥಾಮ, ಮತ್ತು ಸಂಜಯ ಬದುಕಿ ಉಳಿದರೆ, ಪಾಂಡವರ ಪಕ್ಷದಲ್ಲಿ ಐವರು ಪಾಂಡವರು, ಸನಕ,ದುರ್ಯೋಧನನ ಮಲ ಸಹೋದರ ಯುಯುತ್ಸು ಹಾಗೂಶ್ರೀಕೃಷ್ಣ ಬದುಕಿ ಉಳೀತಾರೆ. ಇದು ಅಕ್ಷೋಹಿಣಿ ಯ ರಹಸ್ಯ. ಇಂಥಾ ಇನ್ನೂ ಅನೇಕ ಮಾಹಿತಿಗಾಗಿ ನಮ್ಮ https://www.youtube.com/channel/UChYmSuQtdcVimTk7jmpq5rg  ಗೆ  Login  ಆಗಿ Subscribe  ಮಾಡಿ

Default Comments

Leave a Reply

Facebook Comments

Share This