ಹಿಮಾಲಯದಲ್ಲಿ ಕೇಳಿದ್ದು, ಮೈಸೂರಲ್ಲಿ ಕಂಡಾಗ..! Marmachikitsa..!

ನಾನು ಅವರನ್ನ ಭೇಟಿ ಮಾಡಿದ್ದು  ವಾರಣಾಸಿಯ ಸ್ಮಶಾನ ಘಟ್ಟವೊಂದರಲ್ಲಿ. ನೋಡೋದಕ್ಕೆ ಹುಚ್ಚರಂತೆ ಕಾಣ್ತಿದ್ರು. ಆದ್ರೂ ಅಲ್ಲಿದ್ದವರೆಲ್ಲಾ ಅವರಿಗೆ ಕೊಡ್ತಿದ್ದ ಗೌರವ ನೋಡಿ ನನಗೆ ಆಶ್ಚರ್ಯ.

ದಕ್ಷಿಣದ ನಮಗೆ ಸನ್ಯಾಸಿಗಳು ಅಂದ್ರೆ ಹೀಗೇ ಇರಬೇಕೂ ಅನ್ನೋ ಒಂದು ಕಲ್ಪನೆ ಇದೆ. ಆ ಯಾವ ಲಕ್ಷಣಗಳೂ ಅವರಲ್ಲಿ ಕಾಣ್ತಿರಲಿಲ್ಲ.

ಹೀಗಾಗೀನೇ ಇರಬೇಕು ಅವರ ಬಗ್ಗೆ ಆಕ್ಷಣಕ್ಕೆ ಕುತೂಹಲ ಇತ್ತೇ ಹೊರತು ಗೌರವ  ಹುಟ್ಟಿರಲಿಲ್ಲ. ಅದೇ ಕ್ಷಣದಲ್ಲೇ ಅಲ್ಲಿಗೆ ಒಬ್ಬ ವ್ಯಕ್ತಿಯನ್ನ ನಾಕು ಜನಾ ಹೊತ್ತು ತಂದ್ರು. ಅವನಿಗೆ ನಡೆಯೋದು ಸಾಧ್ಯಾನೇ ಇರಲಿಲ್ಲ.

ಪಾರ್ಶ್ವವಾಯು ಅಂದ್ರೆ ಪೆರಾಲಸಿಸ್ ಆಗಿತ್ತಂತೆ. ನಾನು ನೋಡ್ತಿರೋವಾಗಲೇ, ಆ ಬಾಬಾ, ಅಲ್ಲಿಗೆ ಹೊತ್ತು ತಂದ ಮನುಷ್ಯನ ದೇಹದ ಮೇಲೆ ಕೈ ಆಡಿಸಿದ್ರು. ತಲೆ ಮೇಲೆ ಹೊಡೆದ್ರು.. ಒಂದು ಅರ್ಧ ಗಂಟೆ  ಇದೆಲ್ಲಾ ನಡೀತು.

ಆನಂತರ ಅವನಿಗೆ ಓಡಾಡೋದಕ್ಕೆ ಹೇಳಿದ್ರು. ಏನಾಶ್ಚರ್ಯ..? ನಾಕು ಜನಾ ಹೊತ್ಕೊಂಡು ಬಂದವನು ಕುಂಟುತ್ತಾ ನಡೆಯೋದಕ್ಕೆ ಶುರು ಮಾಡಿದ್ದ. ‘ಅಚ್ಛಾಹುವಾ.. ಛಲೋ’ ಅಂದ್ರು ಬಾಬಾ.. ಅಲ್ಲಿದ್ದವರನ್ನ ನಾನು ಇದೇನು ಅಂತಾ ಕೇಳಿದ್ದೆ. ಅವರು ಅದಕ್ಕೆ ಅಡಂಗಳ್ ಅಂದ್ರು.

ಹಂಗಂದ್ರೇನು ನನಗೆ ಅವತ್ತು ಗೊತ್ತಾಗಲಿಲ್ಲ. ನಾನು ಅದನ್ನ ಮತ್ತೆ ನೋಡಿದ್ದೂ ಆ ಚಿಕಿತ್ಸೆ ಬಗ್ಗೆ ತಿಳಕೊಂಡಿದ್ದು ಮೊನ್ನೆ ಮೈಸೂರಲ್ಲೇ..                    ಆ ಚಿಕಿತ್ಸೆಯನ್ನ ಮರ್ಮ ಚಿಕಿತ್ಸೆ ಅಂತಾ ಕರೀತಾರೆ.

ಆಧುನಿಕ ವೈದ್ಯಕೀಯ ಲೋಕ ನಮ್ಮಿಂದಾಗೋದಿಲ್ಲಾ ಅಂತಾ ಕೈ ಎತ್ತಿದ ಎಷ್ಟೋ ಕೇಸುಗಳು ಮೈಸೂರಿನ ಆ ಟ್ರೀಟ್ ಮೆಂಟ್ ಸೆಂಟರ್ ನಲ್ಲಿ ಸರಿ ಹೋಗ್ತಿವೆ.

ಈ ವಿಷಯಾನ ಯಾಕೆ ಹೇಳ್ತಿದೀನಿ ಅಂದ್ರೆ, ಯಾರಿಗೆ ಯಾವಾಗ ಯಾವ ಚಿಕಿತ್ಸೆಯ ಅವಶ್ಯಕತೆ ಇದೆಯೋ ಬಲ್ಲವರು ಯಾರು..? ಮಾಹಿತಿಯ ಕೊರತೆಯಿಂದಾಗಿ ಚಿಕಿತ್ಸೆ ಸಿಗದೆ ಮನುಷ್ಯಾ ತೊಂದರೆಗೀಡಾಗಬಾರದು.

ಹಾಂ, ಅಲ್ಲಿ ಚಿಕಿತ್ಸೆ ತೀರಾ ದುಬಾರೀನೂ ಅಲ್ಲ. ಸೇವಾ ಮನೋಧರ್ಮದಿಂದಾ ನಡೀತಿರೋ ಟ್ರೀಟ್ಮೆಂಟ್ ಸೆಂಟರ್ ಅದು. ಮನು ಮೆನನ್ ಎಂಬ ಉತ್ಸಾಹಿ ಚಿಕಿತ್ಸಕ ಹಾಗೂ ಅವರ ಪತ್ನಿ ಆಯುರ್ವೇದ ವೈದ್ಯೆ ಡಾ. ಆಶಾ ಮೆನನ್ ಅದನ್ನ ಸ್ಥಾಪಿಸಿದಾರೆ.

ಅಲ್ಲಿನ ದೂರವಾಣಿ ಸಂಖ್ಯೆ : 9449847361

ಇಷ್ಟಕ್ಕೂ ಮರ್ಮ ಚಿಕಿತ್ಸೆ ಅಂದ್ರೇನು ಅದು ಹೇಗೆ ಕೆಲಸಾ ಮಾಡತ್ತೆ ಅನ್ನೋ ಬಗ್ಗೆ ಒಂದು ಸುಂದರ ವಿಡಿಯೋ ಇಲ್ಲಿದೆ ಅದೂ ಕುಡಾ ನಿಮ್ಮ ಮಾಹಿತಿಗಾಗಿ.

Default Comments

Leave a Reply

Facebook Comments

Share This