ಈ ಆಲಯಗಳ ಗರ್ಭಗುಡಿಗೆ ಪುರುಷ ಪ್ರವೇಶ ನಿಷಿದ್ಧ..!

ಬೆಂಗಳೂರು:ನ,4.

ಶಬರಿ ಮಲೈಗೆ ಮಹಿಳೆಯರ ಪ್ರವೇಶದ ವಿವಾದ ಇನ್ನೂ ಬಗೆಹರಿದಿಲ್ಲ. ಸೋಮವಾರದಿಂದಾ ದೇವಾಲಯದ ಬಾಗಿಲು ತೆಗೆಯಲಾಗ್ತಿದ್ದು ಅಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳೊದಕ್ಕೆ ಶಬರಿ ಮಲೈ ಸುತ್ತಮುತ್ತಾ ನಿಷೇಧಾಜ್ಞೆಯನ್ನ ಜಾರಿ ಗೊಳಿಸಲಾಗಿದೆ.

ಶಬರಿ ಮಲೈಗೆ ಪ್ರವೇಶ ಬಯಸ್ತಿರೋ ಸ್ತ್ರೀಯರು ದೇಶದ ಇನ್ನಿತರ ದೇವಾಲಯಗಳಿಗೆಲ್ಲಾ ಭೇಟಿ ಕೊಟ್ಟಿದಾರಾ.? ಅವರು ಕೇವಲ ಶಬರಿ ಮಲೈ, ಶನಿ ಶಿಗ್ಣಾಪುರಗಳಂಥಾ ಆಲಯ ಪ್ರವೇಶಗಳಿಗಾಗಿ ಕ್ಯಾತೆ ತೆಗೀತಿರೋದು ಯಾಕೆ ಅನ್ನೋದು ಬಲಪಂಥೀಯ ಸ್ತ್ರೀ ಹೋರಾಟಗಾರರ ವಾದ.

ಇದೆಲ್ಲಾ ಏನೇ ಇದ್ರೂ ಈ ದೇಶದಲ್ಲಿ ಸ್ತ್ರೀಯರ ಪ್ರವೇಶಕ್ಕೆ ನಿಶೇಧ ಇರೋ ಆಲಯಗಳಿರುವಂತೇ, ಆಲಯದ    ಗರ್ಭಗುಡಿಗೆ ಪುರುಷ ಪ್ರವೇಶವನ್ನ  ನಿಷೇಧ ಮಾಡಿರೋ ಆಲಯಗಳೂ ಇವೆ. ಅಂಥಾ ಆಲಯಗಳಲ್ಲಿ ಮೊದಲನೆಯದು  ಕನ್ಯಾಕುಮಾರಿ ದೇವಾಲಯ.

ಇಲ್ಲಿನ ಆಲಯದಲ್ಲಿ ಜಗನ್ಮಾತೆಯನ್ನ ಪೂಜಿಸೋ ಹಕ್ಕೂ ಅಧಿಕಾರ ಎರಡೂ ಇರೋದು ಮಹಿಳೆಯರಿಗೆ ಮಾತ್ರ. ಆ ತಾಯಿ ಕನ್ಯೆಯಾಗಿ ಶಿವನಿಗಾಗಿ ತಪಸ್ಸು ಮಾಡ್ತಿರೋದ್ರಿಂದ ಇಲ್ಲಿನ ಗರ್ಭಗುಡಿಯೊಳಗೆ ಪುರುಷರ ಎಂಟ್ರಿ ನಿಷಿದ್ಧ ಅಂತಾ ಹೇಳಲಾಗುತ್ತೆ. ಅಷ್ಟೇ ಅಲ್ಲದೇ ಈ ದೇವಿಯನ್ನ ಸಾತ್ವಿಕ, ತಾಂತ್ರಿಕ ಆರಾಧನೆಯಲ್ಲದೇ ಮಧ್ಯಮ ಆರಾಧನೆಯಲ್ಲೂ ಪೂಜಿಸೋದು ಇಲ್ಲಿನ ವಿಶೇಷ.

ಬ್ರಹ್ಮ ದೇವಾಲಯ, ಪುಷ್ಕರ್

ಇನ್ನು ಎರಡನೆಯದು,  ರಾಜಸ್ಥಾನದ ಪುಷ್ಕರ್​ನಲ್ಲಿರೋ ಬ್ರಹ್ಮನ ದೇವಾಲಯ. ಈ ದೇವಾಲಯ ಭಾರತದಲ್ಲಿರೋ ಬ್ರಹ್ಮನ ಆಲಯಗಳಲ್ಲಿ ಪ್ರಮುಖವಾದದ್ದು. ಇಲ್ಲಿರೋ ಪುರಾಣಗಳ ಉಲ್ಲೇಖದ ಪ್ರಕಾರ ಬ್ರಹ್ಮ ಇಲ್ಲೊಂದು ಯಾಗ ಮಾಡಿದ್ನಂತೆ. ಆಯಾಗದ ಸಮಯದಲ್ಲಿ ಸರಸ್ವತಿ ದೇವಿ ಇಲ್ಲದೇ ಇದ್ದ ಕಾರಣ, ಗಾಯತ್ರಿ ದೇವಿಯನ್ನ ಮದುವೆಯಾದ ಬ್ರಹ್ಮ ಯಾಗವನ್ನ ಪೂರ್ಣಗೊಳಿಸಿದ್ದನಂತೆ. ಆದ್ರೆ ಯಾಗ ಮುಗಿದ ನಂತ್ರ ಬಂದ ಸರಸ್ವತಿ ದೇವಿ ತನ್ನ ಜಾಗದಲ್ಲಿ ಇನ್ನೋಂದು ಹೆಣ್ಣು ಇದ್ದಿದ್ದನ್ರಿಂನ ಕಂಡು ಕುಪಿತಳಾಗ್ದತಾಳೆ. ಬ್ರಹ್ಮನನ್ನ ಶಪಿಸ್ಸಿತಾಳೆ. ಅವತ್ತಿನಿಂದ ಇಲ್ಲಿವರೆಗೂ ಈ ದೇವಾಲಯದ ಗರ್ಕ್ಕೆಭಗುಡಿಯೊಳಕ್ಕೆ ವಿವಾಹಿತ ಪುರುಷರ ಪ್ರವೇಶವನ್ನ ನಿಷೇಧಿಸಲಾಗಿದೆ.

 

ಇಂಥಾ  ಮತ್ತೊಂದು ದೇವಾಲಯ ಅಂದ್ರೆ ಅದು ಕೇರಳದ ಅಟುಕಲ್ ದೇವಾಲಯ. ಹೌದು ಕೇರಳದ ಅಟ್ಟುಕಲ್ನಲ್ಲಿರೋ ಭಗವತಿ ದೇವಾಲಯದಲ್ಲೂ ಸಹ ಕೆಲವು ವಿಶೇಷ ಸಂದರ್ಭಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಅದ್ರಲ್ಲೂ ಪ್ರಮುಖವಾಗಿ ಪೊಂಗಲ್ ಉತ್ಸವದ ಸಮಯದಲ್ಲಿ ಇಲ್ಲಿ ಲಕ್ಷಾಂತರ ಮಹಿಳಾ ಭಕ್ತೆಯರು ಸೇರ್ತಾರೆ. ಆ ಉತ್ಸವ  ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್​​ನಲ್ಲೂ ಸ್ಥಾನ ಪಡೆದಿದೆ. ಇದು ಭಾರತದಲ್ಲಿ ನಡೆಯೋ ಅತಿಹೆಚ್ಚು ಭಕ್ತೆಯರು ಪಾಲ್ಗೊಳ್ಳೋ ಅತಿ ದೊಡ್ಡ ಆಚರಣೆ ಅಂತಲೂ ಹೆಸರುವಾಸಿಯಾಗಿದೆ. ಈ ಉತ್ಸವದ ಸಂದರ್ಭದಲ್ಲಿ, ದೇವಿ ಭಗವತಿಯನ್ನ ಪೂಜಿಸೋದು ಸಹ ಹೆಣ್ಣುಮಕ್ಕಳೇ ಅನ್ನೋದು ವಿಶೇಷ. ಹಾಗಾಗಿನೇ ಆ ಸಂದರ್ಬದಲ್ಲಿ ಇಲ್ಲಿಗೆ ಪುರುಷರಿಗೆ ಪ್ರವೇಶ ಇರೋದಿಲ್ಲಾ.

ನಾರಿ ಪೂಜಾ, ಚಕ್ಕುಲ ತಕ್ಕಾವು.

ಇದು ಅಟ್ಟುಕುಲ್​ನ ಕಥೆಯಾದ್ರೆ, ಕೇರಳದಲ್ಲೇ ಇರೋ ಚಕ್ಕುಲತುಕ್ಕಾವು ದೇವಸ್ಥಾನದ್ದು ಮತ್ತೊಂದು ಕತೆ. ಈ ದೇವಾಲಯದಲ್ಲೂ ತಾಯಿ ಭಗವತಿಯನ್ನ ಆರಾಧಿಸಲಾಗುತ್ತೆ. ಅಂತಹದೇವಾಲಯದಲ್ಲಿ ವರ್ಷಕ್ಕೊಮ್ಮೆ ನಡೆಯೋ ನಾರಿ ಪೂಜೆ, ಆಚರಣೆಯ ದಿನ ಪುರುಷರಿಗೆ ಅಲ್ಲಿ ಪ್ರವೇಶ ಇರೋದಿಲ್ಲಾ.

ಪ್ರತಿ ವರ್ಷ ಡಿಸೆಂಬರ್ ತಿಂಗಳ ಮೊದಲ ಶುಕ್ರವಾರಂದು ಈ ನಾರಿ ಪೂಜೆ ನಡೆಯುತ್ತೆ. ಅವತ್ತು ಅಮ್ಮನವರ ದೇವಾಲಯದ ಪೂಜಾರಿ ಭಕ್ತೆಯರ ಪಾದ ತೊಳೆಯೋದ್ರ ಮೂಲಕ ನಾರಿ  ಪೂಜೆಯನ್ನ ಆರಂಬಿಸಲಾಗುತ್ತೆ. ಹತ್ತು ದಿನಗಳ ಕಾಲ ಉಪವಾಸವಿದ್ದ ಮಹಿಳೆಯರು ಈ ಪೂಜೆಯಲ್ಲಿ ಪಾಲ್ಗೊಳ್ಳೊದು ವಿಶೇಷ.

ಇನ್ನೂ ಐದನೆಯದಾಗಿ ಕಾಣಿಸಿಕೊಳ್ಳೋದು ಸಂತೋಷಿ ಮಾ ದೇವಾಲಯ. ಇಲ್ಲಿ ಕೂಡಾ ಸಂತೋಷಿಮಾ ದೇವಿಯ ವ್ರತದ ಸಂದರ್ಭದಲ್ಲಿ ಪುರುಷರಿಗೆ ಪ್ರವೇಶ ವಿಲ್ಲ. ಕಡೆಯದಾಗಿ ಬಿಹಾರದ ಮುಜಾಫರ್​ಪುರದಲ್ಲಿರೋ ಮಾತಾ ದೇವಾಲಯ. ಈ ದೇವಾಲಯದಲ್ಲೂ ಪುರುಷರಿಗೆ ಪ್ರವೇಶವಿಲ್ಲಾ.
ದೇವಾಲಯದ ನಿಯಮದ ಪ್ರಕಾದ ಕೆಲವು ಸಂದರ್ಭಗಳಲ್ಲಿ ಇಲ್ಲಿ ಯಾವುದೇ ಪುರಷರಿಗೂ ಪ್ರವೇಶವಿಲ್ಲಾ. ಭಕ್ತರಷ್ಟೇ ಅಲ್ಲಾ, ಪೂಜಾರಿ ಕೂಡಾ ಇಲ್ಲಿಗೆ ಪ್ರವೇಶಿಸೋ ಹಾಗಿಲ್ಲಾ. ಇನ್ನು ಹಲವಾರು ವಿಶೇಷ ಸಂದರ್ಭಗಳಲ್ಲಿ  ಕಾಮಾಕ್ಯ ದೇವಿ ಆಲಯದಲ್ಲೂ ಪುರುಷರಿಗೆ ಪ್ರವೇಶ ಇಲ್ಲಾ.

ಇನ್ನು, ದ್ವಾದಶಜೋರ್ತಿಲಿಂಗಗಳಲ್ಲಿ ಒಂದಾಗಿರೋ ನಾಸಿಕ್​ನ ತ್ರಯಂಬಕೇಶ್ವರದ ಗರ್ಭಗುಡಿಯಲ್ಲೂ  ಪುರುಷರಿಗೆ ಪ್ರವೇಶವಿಲ್ಲಾ. ಆದ್ರೆ ಈ ದೇವಾಲಯದ್ದುವಿಶಿಷ್ಠ ಕಥೆ. ಹಲವು ವರ್ಷಗಳಿಂದ ಇಲ್ಲಿ ಗರ್ಭಗುಡಿಗೆ ಮಹಿಳೆಯರ ಪ್ರವೇಶ ಇರಲಿಲ್ಲಾ. ಹಾಗಾಗಿ ಈ ವಿಚಾರ ನ್ಯಾಯಾಲಯದ ಮೆಟ್ಟಲು ಹತ್ತಿತ್ತು. ನ್ಯಾಯಾಲಯ ಎಲ್ಲರಿಗೂ ಒಂದೇ ರೀತಿಯ ಆಚರಣೆ ಇರಬೇಕು ಅನ್ನೋ ಆದೇಶ ಕೊಟ್ಟಿತ್ತು. ಹಾಗಾಗಿ

ಅವತ್ತಿನಿಂದ ಇಲ್ಲಿ ಪುರುಷರೂ ಬೇಡ ಮಹಿಳೆಯರೂ ಬೇಡ ಅಂತಾ ಅರ್ಚಕರಿಗೆ ಬಿಟ್ಟರೆ ಬೇರೆಲ್ಲರಿಗೂ ಗರ್ಭಗುಡಿ ಪ್ರವೇಶವನ್ನ ನಿರ್ಬಂದಿಸಲಾಗಿದೆ.ಇವು ಭಾರತದಲ್ಲಿ  ಪುರುಷರಿಗೆ ಪ್ರವೇಶ ನಿರ್ಬಂಧ ಇರೋ ದೇವಾಲಯಗಳು.

ಹಾಗಂತಾ ಇಲ್ಲಿ ನಮ್ಮನ್ನ ಬಿಡಿ ಅಂತಾ ಯಾವ ಪುರುಷರೂ ಗಲಾಟೆ ಮಾಡ್ಕೋತಾ ನಿಂತಿಲ್ಲ. ಒಂದೊಂದು ಆಚರಣೆ, ಪದ್ಧತಿಗಳ ಹಿಂದೂ ಒಂದೊಂದು ವೈಜ್ಞಾನಿಕ ಹಾಗೂ ಸಾಮಾಜಿಕ ಕಾರಣಗಳಿರುತ್ತವೆ. ಶಬರಿ ಮಲೈನಲ್ಲಿ ಮಹಿಳೆಯರ ಪ್ರವೇಶ ನಿರಾಕರಣೆಯ ಹಿಂದಿರೋದು ಸೋಷಿಯೋ ಸೈಕಲಾಜಿಕಲ್ ಕಾರಣ  ಅನ್ನೋದು ಬಹುತೇಕ ಪ್ರಜ್ಞಾವಂತರ ಅಭಿಮತ.

 

Share This