ನಮ್ಮ ನಡುವೆ ಒಬ್ಬರು ಅಪರೂಪದ ಡಾಕ್ಟರ್..!

ಇವತ್ತು ಪ್ರತಿ ತಂದೆ ತಾಯೀನೂ ತಮ್ಮ ಮಕ್ಕಳು ಡಾಕ್ಟರ್ ಆಗಬೇಕೂ ಅಂತಾ ಬಯಸ್ತಾರೆ.. ಡಾಕ್ಟರ್ ಅಂದ ಕುಡಲೇ ಪ್ರತಿಯೊಬ್ಬರ ಮನಸ್ಸಲ್ಲಿ ಬರೋದೂ, ಕಾಸು ಮಾಡೋ ಮಿಷಿನ್ನು ಅನ್ನೋ ಭಾವನೆ. ವೈದ್ಯರನ್ನ ಯಮ ರಾಜನ ಸಹೋದರ ಅಂತಾ ಕರೆದವರೂ ಇದಾರೆ.. ವೈದ್ಯರು ಹಣ ಮಾಡೋದನ್ನೇ ಕಾಯಕ ಮಾಡಿಕೊಂಡಿದಾರೆ ಅಂತಾ ಸಾಕಷ್ಟು ಜನಾ ಬೈಕೊಳ್ತಲೂ ಇರ್ತಾರೆ.. ಆದ್ರೆ ವೈದ್ಯರೆಲ್ಲಾ ಹಾಗೇ ಇರೋದಿಲ್ಲ.. ಅಲ್ಲೂ ಕೆಲವರು ಅತ್ಯುತ್ತಮ ವೈದ್ಯರಿರ್ತಾರೆ. ತಾವು ವೃತ್ತಿಯನ್ನ ಸ್ವೀಕರಿಸಿದ್ದೇ ಜನರ ಸೇವೆ ಮಾಡೋದಕ್ಕೆ ಅಂತಾ ನಂಬಿ ಬದುಕೋ ವೈದ್ಯ ನಾರಾಯಣರೂ ನಮ್ಮ ನಡುವೆ ಸಾಕಷ್ಟು ಮಂದಿಯಿದಾರೆ.. ಅಂಥವರೊಬ್ಬರನ್ನ ನಾವಿವತ್ತು ನಿಮಗೆ ಪರಿಚಯ ಮಾಡಿಕೊಡೋದಕ್ಕೆ ಹೊರಟಿದೀವಿ. ಅವರನ್ನ ಪೀಪಲ್ಸ್ ಡಾಕ್ಟರ್ ಅಂತಾರೆ.. ಡಾಕ್ಟರ್ ಫಾರ್ ಡೆವಲೆಪ್ ಮೆಂಟ್ ಅಂತಲೂ ಕರೀತಾರೆ. ಕೇವಲ ವಯದ್ಯಕೀಯ ಕ್ಷೇತ್ರ ಮಾತ್ರವಲ್ಲಾ, ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿರೋ ಆ ಯುವ ಚೈತನ್ಯದ ಹೆಸರು ಡಾ. ಮಂಜುನಾಥ್.
ಮಂಜುನಾಥ್ ಭಾರತದ ಕೆಲವೇ ಕೆಲವು ಪ್ರಖ್ಯಾತ ಆರ್ಥೊ ಸರ್ಜನ್ ಗಳ ಪೈಕಿ ಒಬ್ಬರು. ಮೈಸೂರಿನ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಕಲಿತು, ಮಣಿಪಾಲ್ ಕಾಲೇಜಲ್ಲಿ ಎಂಸ್ ಆರ್ಥೊ ಮಾಡಿರುವ ಡಾ. ಮಂಜುನಾಥ್ ಮೈಸೂರಲ್ಲಿ ಪ್ರಾಕ್ಟೀಸ್ ಮಾಡ್ತಾರೆ. ಅಲ್ಲೇ ಜೆ ಎಸ್ ಎಸ್ ಮೆಡಿಕಲ್ ಕಾಲೇಜಲ್ಲಿ ಪಾಠ ಮಾಡ್ತಾರೆ. ಮೈಸೂರು ಹಾಗೂ ಸುತ್ತಮುತ್ತಲ ಯುವಕರ ಜೊತೆಗೂಡಿ ಸಾಮಾಜಿಕ ಚಟುವಟಿಕೆಗಲಲ್ಲಿ ಭಾಗಿಯಾಗ್ತಿದಾರೆ. ಮಾನಸಿಕ ಅಸ್ವಸ್ಥರಿಗೊಂದು ಚಿಕಿತ್ಸಾ ಕೇಂದ್ರವನ್ನ ತೆರೆದಿದಾರೆ. ರಸ್ತೆ ಬದಿಯ ನಿರ್ಗತಿಕರಿಗೆ ಆಶ್ರಯ ಕೊಡೋದಕ್ಕಾಗಿ ನಿರ್ಗತಿಕ ಸೇವಾ ಕೇಂದ್ರ ಸ್ತಾಪಿಸಿದಾರೆ. ಅದರ ಜೊತೆಗೆ, ರಾಜ್ಯದ ಹಳ್ಳಿ ಹಳ್ಳಿಗೂ ಅತ್ಯುತ್ತಮ ವೈದ್ಯಕೀಯ ಸೇವೆ ತಲುಪಬೇಕು ಅನ್ನೋ ಕನಸು ಹೊತ್ತಿದಾರೆ ಡಾ.ಮಂಜುನಾಥ್.. ಹಾಗಂತಾ ಅವರೇನು ಆಗರ್ಭ ಶ್ರೀ ಮಂತರ ಮಮನೆಯಲ್ಲಿ ಹುಟ್ಟಿ ಬಂದವರಲ್ಲಾ..ಡಾ. ಮಂಜುನಾಥ್ ಸಾಮಾನ್ಯ ವಕ್ಕಲಿಗರ ಮನೆಯ ಹುಡುಗ. ಅವರ ಮನೇಲೂ ಯಾರೂ ವೈದ್ಯರಿರಲಿಲ್ಲಾ.. ಇಷ್ಟಿದ್ರೂ ಮೆರಿಟ್ ಸೀಟಲ್ಲೇ ಎಂಬಿಬಿಎಸ್ ಎಂಸ್ ಮಾಡಿದ್ರು.
ಡಾಕ್ಟರ್ ಮಂಜುನಾಥ್ರ ತಂದೆ ಹೊನ್ನೆಗೌಡರು, ಸ್ಟೀಲ್ ಫ್ಯಾಕ್ಟರಿಯ ಉದ್ಯೋಗಿ.ಮನೆ ತುಂಬಾ ಜನಾ.. ಎಲ್ಲರಿಗೂ ನೆಲೆ ಕಲ್ಪಿಸಬೇಕಾದ ಜವಾಬ್ದಾಇ ಗೌಡರದ್ದು. ಅಂಥದ್ದರಲ್ಲೇ, ಪಟ್ಟು ಬಿಡದ ತ್ರಿವಿಕ್ರಮನಂತೆ ಮಂಜುನಾಥ್ ತಾವಂದುಕೊಂಡಿದ್ದನ್ನ ಸಾಧಿಸಿದ್ರು..ಇಂತಹ ಸಂದರ್ಬದಲ್ಲೇ ಮಂಜುನಾಥ್ ರ ಜೀವನದಲ್ಲೊಂದು ತಿರುವು ಸಿಕ್ಕಿ ಬಿಟ್ಟಿತ್ತು..ಯಾಕಂದ್ರೆ ಮೊದಲಿಗೆ ಮಂಜುನಾಥ್ ಸೇರಬೇಕು ಅಂತಾ ಬಯಸಿದ್ದು ಸಿವಿಲ್ ಸರ್ವಿಸಸ್ ಅನ್ನ..ಆದ್ರೆ ವಿಧಿ ಅವರ ಹಣೆಯಲ್ಲಿ ನೀನು ಜನರ ಸಂಕಷ್ಟಗಳನ್ನ ಬಗೆಹರಿಸು ಅಂತಾ ಬರೆದಿತ್ತು..
ಹೀಗೆ ವೈದ್ಯರಾಗಿ ಮೈಸೂರಿಗೆ ಹಿಂದುರಿಗಿದ ಡಾ. ಮಂಜಿನಾಥ್ ತಮಗೆ ಮೊದಲ ಅವಕಾಶ ಕೊಟ್ಟ ಸುತ್ತೂರು ಮಠದ ಮೆಡಿಕಲ್ ಕಾಲೇಜನ್ನ ಹಾಗೂ ಸ್ವಾಮಿಗಳನ್ನ ಸದಾ ನೆನಪು ಮಾಡಿಕೊಳ್ತಾರೆ. ಹಾಗೇ ಆದಿ ಚುಂಚನಗಿರಿಯ ಸ್ವಾಮೀಜಿಗಳ ಆಶೀರ್ವಾದದಿಂದಲೇ ತಾವು ಇವತ್ತು ಈ ಮಟ್ಟಕ್ಕ ಎಬರೋದು ಸಾಧ್ಯಾವಯ್ತು ಅಂತಾ ಹೇಳುವ ಮಂಜುನಾಥ್, ತಮ್ಮ ಸಮಸ್ತ ಸೇವೆಗಳ ಹಿಂದಿರೋದು ಈ ಎರಡೂ ಮಠಗಳ ಪ್ರೇರಣೆ ಅನ್ನೋದನ್ನ ಯಾವತ್ತೂ ಮರೆತಿಲ್ಲ.
ಹೀಗಾಗೀನೇ, ಅವರು ವೈದ್ಯ ವೃತ್ತಿಯನ್ನ ಕಾಸು ಮಾಡೋ ಮಿಷಿನ್ ಅಂದ್ಕೊಳ್ಳಿಲ್ಲ.. ಬದಲಿಗೆ ಇದು ಸೇವೆಗೆ ದೇವರು ಕೊಟ್ಟ ಅವಕಾಶ ಅಂತಾ ಆಬವಿಸಿದ್ರು. ಸಾಮಾನ್ಯರಿಗೂ ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೇವೆ ಸಿಗಬೇಕು ಅಮತಾ ಕನಸು ಕಂಡ್ರು. ಪರಿಣಾಮ, ಮೈಸೂರಲ್ಲಿ ಐ ಸರ್ವ್ ನೇಷನ್ ಅನ್ನೋ ಸಂಸ್ತೆ ಹುಟ್ಕೊಳ್ತು. ಆ ಸಂಸ್ಥೆಯ ಮೂಲಕ ವರ್ಷದಲ್ಲಿ ಮೂರು ನೂರ ಹದಿನಾರು ದಿನವೂ ಉಚಿತ ಮೆಡಿಕಲ್ ಚೆಕಪ್ ಕ್ಯಾಂಪುಗಳನ್ನ ನಿರ್ವಹಿಸಿದ್ರು. ಮೈಸೂರಿನ ಪಾರ್ಕ್ ಗಳಲ್ಲಿ ಪ್ರತಿ ನಿತ್ಯಾ ವೈದ್ಯಕೀಯ ಪರೀಕ್ಷೆಗಳು ಉಚಿತವಾಗಿ ನಡೆಯೋ ಹಾಗೆ ನೋಡಿಕೊಂಡ್ರು. ಇಡೀ ರಾಜ್ಯ ಡೆಂಗ್ಯೂ ಜ್ವರಕ್ಕೆ ತುತ್ತಾಗಿದ್ದ ಸಮಯದಲ್ಲಿ, ತಮಗೆ ಸಂಬಂಧವಿಲ್ಲದಿದ್ರೂ ಈ ಮೂಳೆ ತಜ್ಞ ಜನರ ಆರೋಗ್ಯ ಕಾಪಾಡೋದಕ್ಕೆ ಮುಂದಾದ್ರು. ಅತಿ ಕಡಿಮೆ ಬೆಲೆಯಲ್ಲಿ ಡೆಂಗ್ಯೂ ಪರೀಕ್ಷೆಗಳನ್ನ ನಿರ್ವಹಿಸಿದ್ದಲ್ಲದೇ, ಸರ್ಕಾರದ ಆಧೀನದಲ್ಲಿರೋ ಮೈಸೂರಿನ ಕೆ.ಆರ್ ಆಸ್ಪತ್ರಗೆಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳೋ ರಕ್ತ ಪರೀಕ್ಷಾ ಯಂತ್ರೋಪಕರಣಗಳನ್ನ ಉಚಿತವಾಗಿ ಕೊಟ್ರು. ಆ ಮೂಲಕ ಅದೆಷ್ಟೋ ಬಡವ ರೋಗಿಗಳಿಗೆ ಉಚಿತ ರಕ್ತ ಪರೀಕ್ಷೆ ಸಾಧ್ಯವಾಗೋ ಹಾಗೆ ಮಾಡಿದ ಶ್ರೇಯ ಡಾ. ಮಂಜುನಾಥ್ ಅವರಿಗೆ ಸಲ್ಲುತ್ತೆ.

ನಿಜಾ.ಮಂಜುನಾಥ್ ಅವರಲ್ಲಿನ ಈ ಗುಣಾನೇ ಅವರನ್ನ ದೇಶದ ಕೆಲವೇ ಕೆಲವು ಪ್ರಖ್ಯಾತ ಮೂಳೆ ಸರ್ಜನ್ ಗಳ ಪೈಕಿ ಒಬ್ಬರನ್ನಾಗಿಸಿರೋದು.ಅವರ ಸೇವೆ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಗಿಲ್ಲ. ದೇಶದ ಹೊರಗೂ ಡಾ. ಮಂಜುನಾಥ್ ಸಾಕಷ್ಟು ಸೇವೆ ಸಲ್ಲಿಸಿದಾರೆ.ಎಲ್ಲೇ ಸಂಕಷ್ಟ ಅಂದ್ರು ಅಲ್ಲಿಗೆ ತಂಡ ಕಟ್ಟಿಕೊಂಡು ಓಡಿ ಹೋಗ್ತಾರೆ.ಯಾಕೆ ಡಾಕ್ಟರೇ ಹಿಂಗೆ ಅಂದ್ರೆ, ನಾನಿರೋದೇ ಹಿಂಗೆ ಅಂತಾ ಮುಗ್ಧವಾಗಿ ನಗೋ ಡಾಕ್ಟರ್ ಮಂಜುನಾಥ್, ಅವರ ಜೀವನಕ್ಕೆ ಪ್ರೇರಣೆ ಕೊಟ್ಟ ಮತ್ತೆರಡು ಮಹಾ ಮಹಿಮರರನ್ನ ನೆನಪು ಮಾಡಿಕೊಳ್ತಾರೆ. ಈ ವಕ್ಕಲಿಗರ ಮನೆಯ ಸಾಮಾನ್ಯ ಹುಡುಗ ಇವತ್ತು ನಮ್ಮ ನಡುವಿನ ವೈದ್ಯರಿಗಷ್ಟೇ ಅಲ್ಲಾ, ಈಗ ಬರೋ ಹೊಸಾ ವೈದ್ಯರಿಗೂ ಪ್ರೇರಣೆಯಾಗುವ ಹಂತಕ್ಕೆ ಬೆಳೆದಿದಾರೆ.
ಇವತ್ತು ಮೈಸೂರು, ಚಾಮರಾಜ ನಗರ ಹಾಗೂ ಕೊಡಗು ಭಾಗದಲ್ಲಿ ಮಂಜುನಾಥ್ರವರು ಯಾರಿಗೆ ಗೊತ್ತಿಲ್ಲಾ ಅನ್ನೋ ಹಾಗಾಗಿದೆ.ಕಾಯಿಲೆ ಬಂದ್ರು ಆಸ್ಪತ್ರೆಗಳಿಗೆ ಕಾಲಿಡೋದಕ್ಕೂ ಹೆದರುತ್ತಿದ್ದ ಅದೆಷ್ಟೋ ಮಂದಿ ಮಂಜುನಾಥ್ರವರ ನೆರವಿನಿಂದ ಚಿಕಿತ್ಸೆ ಪಡೆದು ಆರೋಗ್ಯಪೂರ್ಣರಾಗಿ ಮನೆಗಳಿಗೆ ಹಿಂದಿರುಗಿದ್ದಾರೆ..ವೈದ್ಯಕೀಯ ಪದವಿ ಹಾಗೂ ವೃತ್ತಿ ಕೇವಲ ಹಣ ಮಾಡೋದಕ್ಕೆ ಇರೋದಲ್ಲ,. ಬದಲಾಗಿ ಇದು ಸಮಾಜಕ್ಕೆ ಸೇವೆ ಸಲ್ಲಿಸೋ ಸಲುವಾಗಿ ನಮಗೆ ಸಿಕ್ಕ ಅವಕಾಶ. ನಾವು ನಮ್ಮ ಮನೆಯನ್ನ ಕಾಪಾಡಿಕೊಳ್ತೀವೋ ಹಾಗೇ ಈ ದೇಶವನ್ನು, ಇಲ್ಲಿನ ಜನರನ್ನ ಕಾಪಾಡಬೇಕು ಅನ್ನೋದು ಡಾಕ್ಟರ್ ಮಂಜುನಾಥ್ ನಂಬಿರೋ ಸಿದ್ಧಾಂತ. ಯಾವ ಆಡಂಬರುಗಳೂ, ಅಹಂಕಾರ ಇಲ್ಲದ ಈ ಈ ವೈದ್ಯ ರತ್ನ, ಇವತ್ತು ಮೈಸೂರಲ್ಲಿ ಪೀಪಲ್ಸ್ ಡಾಕ್ಟರ್ ಅಂತಾ ಹೆಸರು ಮಾಡಿದಾರೆ. ಪ್ರತಿ ಊರಲ್ಲೂ ಒಬ್ಬೊಬ್ಬ ಮಂಜುನಾಥ್ ಇದ್ದು ಬಿಟ್ರೂ ನಮ್ಮ ಊರುಗಳು ಸುಧಾರಿಸಿಬಿಡತ್ವೆ ಅಂತಾ ಹೇಳಿದರೆ ಅದು ಅತಿಶಯೋಕ್ತಿ ಅಲ್ಲ.

Share This