ಹಿಂಗೇ ಆದ್ರೆ ಹೊಗೆ ಹಾಕಿಸಿಕೊಳ್ಳೋದಕ್ಕೆ ಇನ್ನೆಷ್ಟುದಿನಾ ಬೇಕು..?

ರಿಸರ ದಿನಾಚರಣೆ ಬಂತೂ ಅಂದ್ರೆ, ಪರಿಸರದ ಬಗ್ಗೆ ಒಂದಷ್ಟು ಭಾಷಣಗಳನ್ನ ಕೇಳ್ತೀವಿ. ಸರ್ಕಾರ ಬೊಕ್ಕಸದಿಂದಾ ಒಂದಷ್ಟು ಹಣ ಖರ್ಚು ಮಾಡಿ ಪರಿಸರ ದಿನಾಚರಣೆ ಮಾಡಿದ ಖುಷಿ ಅನುಭವಿಸತ್ತೆ. ಕೆಲ ಸಂಘ ಸಂಸ್ಥೆಗಳು ಪರಿಸರದ ಹೆಸರಲ್ಲಿ ಫೋಟೋ ತೆಗೆಸಿಕೊಂಡು, ಪೇಪರ್ರೂ, ಟಿವಿಗಳಲ್ಲಿ ಪ್ರಚಾರ ಪಡಕೊಂಡು ಸುಮ್ಮನಾಗಿಬಿಡತ್ವೆ. ಪರಿಸರ ಉಳಿಸೋದು ಅಂದ್ರೆ ಇಷ್ಟೇನಾ..?

ಸೇವ್ ವಾಟರ್.. ಸೇವ್ ಎನ್ವರಾನ್ಮೆಂಟ್ ಅಂತಾ ಘೋಷಣೆಗಳನ್ನ ಕೂಗಿದ್ರೆ ಪರಿಸರ ಉಳಿಯತ್ತಾ..? ಅದರಲ್ಲಿ ವ್ಯಕ್ತಿ ಹಾಗೂ ಸಮೂಹಗಳ ಜವಾಬ್ದಾರಿ ಏನು..? ಪರಿಸರ ಉಳಿಸೋದಕ್ಕೆ ವಯಕ್ತಿಕವಾಗಿ ನಾವೇನು ಮಾಡ್ತಿದೀವಿ ಅನ್ನೋ ಸಣ್ಣ ಆತ್ಮಾವಲೋಕನಕ್ಕೆ ಇದು ಕಾಲ ಅಲ್ವಾ..?

ನಾವು ಹೀಗೆ ಬೇಜವಾಬ್ದಾರಿಯಿಂದಾ ಕಾಡು ,ನೀರಿನ ಮೂಲಗಳು, ಮರ ಗಿಡಗಳನ್ನ ನಾಶ ಮಾಡಿ ಪ್ಲಾಸ್ಟಿಕ್ ತುಂಬ್ತಾ ಹೋದ್ರೆ ನಮ್ಮ ಮಕ್ಕಳ ಕಾಲಕ್ಕೆ ಈ ಭೂಮಿ ಮೇಲೆ ಆರೋಗ್ಯವಾಗಿ ಬದುಕೋದಕ್ಕಾದ್ರೂ ಆಗತ್ತಾ..? ಆಗ, ನಾವು ಇವತ್ತು ಮುಂದಿನ ತಲೆಮಾರುಗಳಿಗಾಗಿ  ಮಾಡಿಡ್ತಿರೋ ಆಸ್ತಿ, ಹಣ ಇವೆಲ್ಲವನ್ನೂ ತಗೊಂಡು ಅವರೇನು ಮಾಡೋದಕ್ಕೆ ಸಾಧ್ಯ..? ಒಂದು ಸರಿ ಯೋಚಿಸಬೇಕಾದ ಕಾಲ ಇದು. ಪರಿಸರ ಉಳಿಸೋ ಬಗ್ಗೆ ನಮ್ಮ ಕೊಡುಗೆ ಏನು..? ಈ ವಿಡಿಯೋ ನೋಡಿ. ನಾವೇನು ಮಾಡೋದಕ್ಕೆ ಸಾಧ್ಯ ಅಷ್ಟನ್ನಾದ್ರೂ ಮಾಡೋ ಸಂಕಲ್ಪ ಮಾಡೋಣ ಅಲ್ವಾ..

Default Comments

Leave a Reply

Facebook Comments

Share This