ದ್ರಾವಿಡ ಮುನ್ನೇತ್ರ ಕಣ್ಣೀರು..!The journey of Karunanidhi..!

 

ದ್ರಾವಿಡ ಹೋರಾಟದ ಅಂತಿಮ ಕೊಂಡಿ ಕಳಚಿದೆ. ತಮಿಳು ನಾಡಿನಲ್ಲಿ ಈಗ ಡಿಎಂಕೆ ಅಂದ್ರೆ ದ್ರಾವಿಡ ಮುನ್ನೇತ್ರ ಕಣ್ಣೀರು..!

ಆ ನಾಯಕ ಸಮ ಸಮಾಜದ ಕನಸು ಕಂಡಿದ್ರು. ಪೆರಿಯಾರ್, ಅಣ್ಣಾದೊರೈ ಮುಂತಾದ ಮಹಾನ್ ನಾಯಕರ ನೆರಳಲ್ಲಿ ಬೆಳೆದಿದ್ರು. ದ್ರಾವಿಡ ಹೋರಾಟದ ಮೂಲಕ ತಮಿಳಿಗರ ಅಸ್ಮಿತೆಗಾಗಿ ಹೋರಾಟ ಮಾಡಿದ್ರು.

ಐದುಬಾರಿ ಮುಖ್ಯಮಂತ್ರಿಯಾಗಿ, ಸೋಲಿಲ್ಲದ ನಾಯಕನಾಗಿ ತಮಿಳು ಜನಮಾನಸದ ಹೃದಯ ಸಾಮ್ರಾಟನಾಗಿದ್ದ ಎಂ ಕರುಣಾನಿಧಿ ಅವರ ರಾಜಕೀಯ ಬದುಕನ್ನ ಒಂದೆರಡು ಅಕ್ಷರಗಳಲ್ಲಿ ಕಟ್ಟಿಕೊಡೋದು ನಿಜಕ್ಕೂ ಕಷ್ಟದ ಕೆಲಸ.

ಇಡೀ ದಕ್ಷಿಣ ಭಾರತಕ್ಕೆ ದ್ರಾವಿಡ ಚಲವಳಿಯ ಗಾಳಿತಾಗುವಂತೆ ಮಾಡಬೇಕು.. ದಕ್ಷಿಣದಲ್ಲಿ ಉತ್ತರ ಭಾರತೀಯರ ಅಹಂಕಾರದ ವರ್ತನೆಗೆ ಕಡಿವಾಣ ಹಾಕಬೇಕು ಅಂತೆಲ್ಲಾ ಕನಸು ಕಂಡಿದ್ದ ಆ ಮಹಾನ್ ನಾಯಕ, ತಮಿಳು ರಾಜಕೀಯ, ಸ್ವಜನ ಪಕ್ಷಪಾತ, ಅಧಿಕಾರದ ದಾಹ,  ಕುಟುಂಬ ಕಲಹಗಳಲ್ಲೇ ಬಹುತೇಕ ಸಮಯವನ್ನ ಕಳೀಬೇಕಾಗಿ ಬಂದಿದ್ದು ನಿಜಕ್ಕೂ ದುರಂತ.

ತಮಿಳು ನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತ ಬದುಕಿದ್ದಷ್ಟೂ ದಿನ ಆಕೆಯ ಆಜನ್ಮ ಶತ್ರುವಿನಂತೇ ವರ್ತಿಸಿದ್ದ ಕರುಣಾ ನಿಧಿ, ಜಯಾ ದಿವಂಗತರಾದ ಕೆಲವೇ ತಿಂಗಳುಗಳಲ್ಲಿ,  ತಮ್ಮ ಬದುಕಿನ ಅರ್ಥವೇ ಮುಗೀತೇನೊ ಅನ್ನೋ ಹಾಗೆ, ಹಾಸಿಗೆ ಹಿಡಿದಿದ್ದರು. ಅವರ ವಯಸ್ಸೇನೂ ಕಡಿಮೆಯಾಗಿರಲಿಲ್ಲಾ.

ತಮ್ಮ 94 ವರ್ಷಗಳ ಸುದೀರ್ಘ ಹಾಗು ತುಂಬು ಜೀವನದ ನಂತರ ಮಂಗಳವಾರದ ಗೋಧೂಳಿ ಸಮಯದಲ್ಲಿ ಇಹಲೋಕ ಬಿಟ್ಟಿದ್ದಾರೆ.. ಕರುಣಾ ನಿಧಿಯವರ ಬದುಕಿನ ಕುರಿತಾದ ಚಿಕ್ಕ ಪರಿಚಯವನ್ನು ಒಳಗೊಂಡ ವಿಡಿಯೋ ಒಂದು ಇಲ್ಲಿದೆ. ಸ್ವಲ್ಪ ಸಮಯ ಮಾಡಿಕೊಂಡು ನೋಡಿಬಿಡಿ.

 

Default Comments

Leave a Reply

Facebook Comments

Share This