ಹೀಗೆ ಮಾಡಿದರೆ ಎಂಥಾ ಕೆಮ್ಮೇ ಆದರೂ ನಿಂತು ಹೋಗಬೇಕು..!

ನೀವು ಅತಿಯಾಗಿ ಕೆಮ್ಮತಿದೀರಾ..? ಕೆಮ್ಮುವಾಗ ಶ್ವಾಸನಾಳದ ಆಳದಿಂದಾ ಉರಿ ಶುರುವಾಗಿದೆಯಾ..? ಒಣ ಕೆಮ್ಮು ಅಥವಾ ಕಫ ಶುರುವಾದಾಗ ಬರೀ ಕೆಮ್ಮು ಅಂತಾ ಅದನ್ನ ನಿರ್ಲಕ್ಷ್ಯ ಮಾಡಿಬಿಡಬೇಡಿ. ಅದು ಬ್ರಾಂಕೈಟಿಸ್ ಆಗಿರೋ ಸಾಧ್ಯತೇ ಕೂಡಾ ಇರತ್ತೆ. ಇವತ್ತು ಬ್ರಾಂಕೈಟಿಸ್ ಸಹಜವಾಗೇ ಪ್ರತಿಯೊಬ್ಬರನ್ನೂ ಆವರಿಸ್ತಿರೋ ಖಾಯಿಲೆ. ಅದರಲ್ಲೂ ನೀವು ಸಿಗರೇಟು ತಂಬಾಕಿನ ಅಭ್ಯಾಸ ಇಟ್ಕೊಂಡಿದ್ರೆ, ಅಥವಾ ಬೆಂಗಳೂರಿನಂಥಾ ಅತ್ಯಂತ ಪೊಲ್ಯೂಟೆಡ್ ನಗರದಲ್ಲಿ ವಾಸ ಮಾಡ್ತಿದೀರಿ ಅಂದ್ರೆ ನಿಮಗೆ ಬ್ರಾಂಕೈಟಿಸ್ ನಿಂದಾ ತಪ್ಪಿಸಿಕೊ್ಳೊಧಕ್ಕೆ ಸಾಧ್ಯವಾಗದೇ ಇರಬಹುದು.
ಏನಪ್ಪಾ ಇದೂ ಬ್ರಾಂಕೈಟಿಸ್ ಅಂದ್ಕೋತಿದೀರಾ..? ಇದಕ್ಕೆ ಕನ್ನಡದಲ್ಲಿ ಶ್ವಾಸನಾಳದ ಉರಿಯೂತ ಅಂತಾ ಹೇಳ್ತಾರೆ. ಅಸ್ತಮಾ ಖಾಯಿಲೆಗೆ ಮೂಲ ಈ ಬ್ರಾಂಕೈಟಿಸ್. ತೀವ್ರವಾದ ಕೆಮ್ಮು. ಉಸಿರಾಟದ ತೊಂದರೆ, ಎದೆ ಉರಿ, ಕೆಮ್ಮ ಹೆಚ್ಚಾದಾಗ ಎದೆ ನೋವು ಹಾಗೂ ಶ್ವಾಸನಾಳಗಳಲ್ಲಿ ಉರಿ ಕಾಣಿಸಿಕೊಳ್ಳೊದು ಬ್ರಾಂಕೈಟಿಸ್ ಲಕ್ಷಣ. ಆ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ

ಸಾಮಾನ್ಯವಾಗಿ, ನಮಗೆ ಕೆಮ್ಮು ಬಂದ್ರೆ ಅದು ಒಂದೆರಡು ದಿನಗಳಲ್ಲಿ ಸರಿ ಹೋಗಿಬಿಡಬೇಕೂ ಹಾಗಾಗಲಿಲ್ಲಾ ಅಂದ್ರೆ, ಕೆಮ್ಮು ಉಲ್ಬಣ ಗೊಂಡರೆ ಅದನ್ನ ನಿರ್ಲಕ್ಷ್ಯ ಮಾಡೋದಕ್ಕೆ ಹೋಗಬೇಡಿ. ಹಾಗೇನಾದ್ರೂ ಆದ್ರೆ, ಅದು ಮುಂದೆ ಅಸ್ತಮಾ ಆಗಿ ಪರಿವರ್ತನೆ ಗೊಳ್ಳೋ ಸಾಧ್ಯತೆಗಳಿರತ್ತವೆ.
ಹಾಗಾದ್ರೆ, ಈ ಬ್ರಾಂಕೈಟಿಸ್ ಗೆ ಪರಿಹಾರ ಏನು..? ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲಾ.. ನಮ್ಮ ಮನೆಯಲ್ಲಿನ ಕೆಲ ಪದಾರ್ಥಗಳಿಂದಲೇ ನಿಮ್ಮ ಶ್ವಾಸಕೋಸಗಳನ್ನ ಶ್ವಾಸ ನಾಳವನ್ನ ನೀವು ಶುದ್ಧಿ ಮಾಡಿಕೊಳ್ಳಬಹುದು. ಮತ್ತು ಶ್ವಾಸ ನಾಳದಲ್ಲಿ ಸೋಂಕು ಹರಡದಂತೆ, ಶ್ವಾಸ ನಾಳಗಳು ಊತಕ್ಕೆ ಈಡಾಗದಂತೆ ಕಾಪಾಡಿಕೊಳ್ಳಬಹುದು.

ಕಾಳು ಮೆಣಸು

ಗೆಳೆಯರೇ, ನಾವು ಇವತ್ತು ಬದುಕ್ತಿರೋ ಪೊಲ್ಯೂಟೆಡ್ ವಾತಾವರಣ, ಕಲುಷಿತ ಗೊಂಡ ಗಾಳಿ ಜೊತೆಗೆ ನಾವು ಬೆಳೆಸಿಕೊಂಡ ಸಿಗರೇಟ್ ಹಾಗೂ ಇನ್ನಿತರ ಅಭ್ಯಾಸಗಳು ನಮ್ಮ ಶ್ವಾಸಕೋಶ ಹಾಗೂ ಶ್ವಾಸನಾಳಗಳನ್ನ ಬಲಹೀನ ಗೊಳಿಸೋದೇ ಅಲ್ಲದೇ, ಅವುಗಳಿಗೆ ಸೋಕು ತಗುಲೋ ಹಾಗೆ ಮಾಡ್ತಿವೆ. ಅದರ ಪರಿಣಾಮವೇ ಈ ಬ್ರಾಂಕೈಟಿಸ್. ಶ್ವಾಸ ನಾಳಗಳು ಆರೋಗ್ಯ ಕೆಡಿಸಿಕೊಂಡಾಗ,ಅಲ್ಲಿ ಊತ ಉಂಟಾದಾಗ ಸಹಜವಾಗೇ ಉಸಿರಾಟದ ತೊಂದರೆ ಉಂಟಾಗತ್ತೆ. ಶ್ವಾಸಕೋಸಗಳಿಗೆ ಸರಿಯಾದ ಪ್ರಮಾಣದ ಗಾಳಿ ಸಿಗದೇ ಇದ್ದಾಗ ಕೆಮ್ಮು ದಮ್ಮುಗಳು ಶುರುವಾಗತ್ವೆ.

ಇದರಿಂದಾ ನಾವು ನಮ್ಮನ್ನ ಕಾಪಾಡಿಕೋಬೇಕೂ ಅಂದ್ರೆ, ನಮ್ಮ ಶ್ವಾಸನಾಳಗಳ ಆರೋಗ್ಯವನ್ನ ಕಾಪಾಡಬೇಕು. ಅದಕ್ಕೆ ನೀವು ಹೆಚ್ಚು ತಲೆ ಕೆಡಿಸಿಕೋಬೇಕಿಲ್ಲಾ.. ಕೆಮ್ಮು ಶುರುವಾಗಿದೆ ಅಂತಾ ಅನ್ನಿಸಿದ ಕೂಡಲೇ, ಕಾಳು ಮೆಣಸು, ಪಿಪಲಿ, ಹಾಗೂ ಒಣ ಶುಂಠಿಯ ಪುಡಿಯನ್ನ ಮಾಡಿಕೊಂಡು, ಅದನ್ನ ಜೇನು ತುಪ್ಪದ ಜೊತೆ ದಿನಕ್ಕೆ ಮೂರು ಬಾರಿ ಸೇವಿಸ್ತಾಬನ್ನಿ. ನಿಮ್ಮ ಸಮಸ್ಯೆಗೆ ಅದು ಶೀಘ್ರ ಪರಿಣಾಮ ಉಂಟು ಮಾಡತ್ತೆ. ಅಷ್ಟೇ ಅಲ್ಲಾ, ಉರಿಯೂತ ಸಮಸ್ಯಗೆ ಅದು ತಕ್ಷಣದ ಪರಿಹಾರವನ್ನೂ ನಿಡತ್ತೆ.

ಅಮೃತ ಬಳ್ಳಿ

ಇನ್ನು ನಿಮಗೆ ಅಮೃತ ಬಳ್ಳಿ ಗೊತ್ತಲ್ಲಾ, ಆಯುರ್ವೇದದಲ್ಲಿ ಇದಕ್ಕೆ ಅತ್ಯಂತ ಮಹತ್ವ ಇದೆ. ಈ ಅಮೃತ ಬಳ್ಳಿಯ ಜೂಸ್ ಕೂಡಾ ಎದೆ ಉರಿಗೆ ಪರಿಹಾರ ಕೊಡತ್ತೆ. ತೀವ್ರ ಕೆಮ್ಮಿನಿಂದಾ ಎದೆ ನೋವು ಶ್ವಾಸನಾಳಗಳ ಉರಿ ಕಾಣಿಸಿಕೊಂಡಾಗ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಇದನ್ನ ಕುಡೀತಾ ಬಂದ್ರೆ ನಿಮ್ಮ ಎದೆಭಾಗದ ಉರಿಯನ್ನ ಶಮನ ಮಾಡತ್ತೆ.ಹಾಗೂ ಕೆಮ್ಮನ್ನೂ ಕಡಿಮೆ ಮಾಡತ್ತೆ.

ಟೊಮೆಟೋ ಸೂಪ್

ಇನ್ನು ಟೊಮೆಟೋ ಸೂಪ್ ಕೂಡಾ ಕೆಮ್ಮು ಹಾಗೂ ಕಫ ಕಡಿಮೆ ಯಾಗೋ ಹಾಗೆ ಮಾಡತ್ತೆ. ದಿನಕ್ಕೆ ಎರಡು ಬಾರಿ ಟೊಮೆಟೋ ಸೂಪ್ ಗೆ ಕಾಳು ಮೆಣಸಿನ ಪುಡಿಯನ್ನ ಬೆರೆಸಿ ಕುಡಿಯುವುದರಿಂದಾ ಕಫ ಹಾಗೂ ಕೆಮ್ಮು ಕಡಿಮೆಯಾಗುತ್ತವೆ.

ಬೆಳ್ಳುಳ್ಳಿ

ಇದಕ್ಕೆ ಇನ್ನೊಂದು ಅತ್ಯದ್ಭುತ ಔಷಧ ಅಂದ್ರೆ ಬೆಳ್ಳುಳ್ಳಿ., ಬೆಳ್ಳುಳ್ಳಿ ಪುಡಿ ಹಾಗೂ ಅದಕ್ಕೆ ತ್ರಿಕಟು ಚೂರ್ಣವನ್ನ 4: 1 ರ ಪ್ರಮಾಣದಲ್ಲಿ ಬೆರೆಸಿ, ಜೇನು ತುಪ್ಪದ ಜೊತೆ ದಿನಕ್ಕೆರಡು ಬಾರಿ ಸೇವಿಸ್ತಾಬಂದ್ರೆ ನಿಮ್ಮ ಶ್ವಾಸಕೋಶ ಹಾಗೂ ಶ್ವಾಸನಾಳಗಳ ಆರೋಗ್ಯ ಸುಧಾರಿಸುತ್ತದೆ. ಶುಂಠಿ ಕಶಾಯ ಸೇವನೆ ಕುಡಾ ಉಪಯುಕ್ತ.

ಎಣ್ಣೆ ಮಸಾಜ್

ಇದರ ಜೊತೆಗೆ, ಎದೆಗೆ ಸಾಸಿವೆ ಎಣ್ಣೆ ಯಿಂದಾ ಮಸಾಜ್ ಮಾಡೋದ್ರಿಂದ ಎದೆ ಬಿಗಿತ ಕಡಿಮೆಯಾಗತ್ತೆ. ಇದೆಲ್ಲದರ ಜೊತೆಗೆ ಕೆಮ್ಮು ಹಾಗೂ ಶ್ವಾಸನಾಳಗಳ ತೊಂದರೆ ಉಂಟಾದಾಗ ನೀವು ಮಾಡಬೇಕಾದ ಮೊದಲ ಕೆಲಸ ಅಂದ್ರೆ, ಥಣ್ಣಗಿನ ಪದಾರ್ಥಗಳ ಸೇವನೆಯನ್ನ ಬಿಟ್ಟು ಬಿಡೋದು. ಬಿಸಿ ನೀರನ್ನ ಕುಡಿಯೋದು. ಕೆಮ್ಮು ದಮ್ಮು ಉಂಟಾದಾಗ ಸಾಧ್ಯವಾದಷ್ಟೂ ಹೆಚ್ಚು ನೀರುಕುಡಿಯಿರಿ. ಗಂಟಲಿನ ನಾಳಗಳು ಒಣಗದ ಹಾಗೆ ನೋಡಿಕೊಳ್ಳಿ. ಹೆಚ್ಚು ಬಿಸಿನೀರಿನ ಸೇವನೆ ಮಾಡಿ. ಇದು ಗಂಟಲಿನ ಉರಿ ಹಾಗೂ ಊತಗಳಿಗೆ ಉಪಶಮನ ನೀಡುತ್ತದೆ.

ಹಾಂ.. ಹೇಳೋದು ಮರೆತೆ, ನೀವು ಸಿಗರೇಟು ಬೀಡಿ ಸೇದ್ತೀರಿ ಆದ್ರೆ, ದಯವಿಟ್ಟು ಈ ಕ್ಷಣದಿಂದಲೇ ಅದನ್ನ ಬಿಟ್ಟುಬಿಡಿ. ತಂಬಾಕಿಗಿಂತಾ ಹೆಚ್ಚಾಗಿ ಅದಕ್ಕೆ ಬಳಸೋ ಕೆಮಿಕಲ್ ನಿಮ್ಮ ಶ್ವಾಸಕೋಶಗಳನ್ನ ಬಲಹೀನ ಗೊಳಿಸತ್ತೆ. ಶ್ವಾಸನಾಳಗಳಲ್ಲಿ ಟಾರ್ ಸೇರಿಕೊಂಡು ನಿಮ್ಮ ಉಸಿರಾಟದ ತೊಂದರೆಗಳನ್ನ ಹೆಚ್ಚು ಮಾಡತ್ತೆ. ನೀವು ಪ್ರೀತಿಸೋ ನಿಮ್ಮ ಕುಟುಂಬದ ಸದಸ್ಯರಿಗಾಗಿ ನಿಮ್ಮ ಧೂಮಪಾನದ ಅಭ್ಯಾಸವನ್ನ ಬಿಟ್ಟುಬಿಡಿ.
ಇದೆಲ್ಲಾಮಾಡಿ ಸುಮ್ಮನಿದ್ದುಬಿಡಬೇಡಿ. ಇದು ನಿಮ್ಮ ಗಂಟಲು ಬೇನೆ ಹಾಗೂ ಕೆಮ್ಮಿಗೆ ತಾತ್ಕಾಲಿಕ ಉಪಶಮನ ಅಷ್ಟೇ.. ಇಷ್ಟಾದ ನಂತರವೂ ನಿಮ್ಮ ಕೆಮ್ಮು ಹಾಗೇ ಇದ್ರೆ, ತಕ್ಷಣ ನಿಮ್ಮ ಖಾಸಗಿ ವೈದ್ಯರನ್ನ ಸಂಪರ್ಕಿಸಿ. ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳಿ.
ಇದು ಕೆಮ್ಮು ಹಾಗೂ ಗಂಟಲ ಉರಿಯೂತಕ್ಕೆ ಸಂಬಂಧಿಸಿದಂತೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಚಿಕಿತ್ಸೆ. ನಿಮ್ಮ ಆರೋಗ್ಯವೇ ನಮ್ಮ ಕಾಳಜಿ. ಆರೋಗ್ಯಕ್ಕೆ ಸಂಬಂಧಿಸಿದ ನಿರಂತರ ಮಾಹಿತಿಗಾಗಿ ನಮ್ಮ M2 ಚಾನೆಲ್ ಗೆ Subscribe  ಆಗಿ

 

Default Comments

Leave a Reply

Facebook Comments

Share This